ವಿರಾಟ್ ಕೊಹ್ಲಿ ಗಳಿಕೆ ಕೇಳಿದ್ರೆ ದಂಗಾಗ್ತೀರಾ..! ಎಷ್ಟು? ಇಲ್ಲಿ ನೋಡಿ..

ವಿಶ್ವದಲ್ಲಿ ಅತಿ ಹೆಚ್ಚು ಗಳಿಸುವ ಆಟಗಾರರ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದ್ರಲ್ಲಿ ಭಾರತದ ಏಕೈಕ ಆಟಗಾರನ ಹೆಸರಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಟಾಪ್ 100 ಪಟ್ಟಿಯಲ್ಲಿ ಕೊಹ್ಲಿ 83ನೇ ಸ್ಥಾನದಲ್ಲಿದ್ದಾರೆ. ವಿಶೇಷವೆಂದ್ರೆ ಈ ಪಟ್ಟಿಯಲ್ಲಿ ಒಬ್ಬ ಮಹಿಳಾ ಆಟಗಾರ್ತಿ ಹೆಸರೂ ಇಲ್ಲ.

ಫೋರ್ಬ್ಸ್ ನ ಅತಿ ಹೆಚ್ಚು ಗಳಿಕೆ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕೊಹ್ಲಿ, ಈ ವರ್ಷದ ಗಳಿಕೆ 24 ಮಿಲಿಯನ್ ಡಾಲರ್. 4 ಮಿಲಿಯನ್ ಡಾಲರ್ ಸಂಬಳವಾದ್ರೆ 20 ಮಿಲಿಯನ್ ಡಾಲರ್ ಜಾಹಿರಾತು ರೂಪದಲ್ಲಿ ಬಂದಿದೆ. ರೊನಾಲ್ಡ್ 2017ರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದರೆ ವಿರಾಟ್ ಕೊಹ್ಲಿ 89ನೇ ಸ್ಥಾನದಲ್ಲಿದ್ದರು.

2017ರಲ್ಲಿ ಕೊಹ್ಲಿ ಗಳಿಕೆ 22 ಮಿಲಿಯನ್ ಡಾಲರ್ ಆಗಿತ್ತು. 3 ಮಿಲಿಯನ್ ಡಾಲರ್ ಸಂಬಳವಾದ್ರೆ 19 ಮಿಲಿಯನ್ ಡಾಲರ್ ಜಾಹಿರಾತಿಗೆ ಸಿಕ್ಕಿತ್ತು. ಬಾಕ್ಸಿಂಗ್ ಕಿಲಾಡಿ ಫ್ಲಾಯ್ಡ್ ಮೇವೆದರ್ 2018ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮೇವೆದರ್ ಗಳಿಕೆ 275 ಮಿಲಿಯನ್ ಡಾಲರ್.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..