ಬ್ರಾವೋ ನಿದ್ದೆ ಕೆಡಿಸಿದ್ದಾಳಂತೆ ಈ ನಟಿ..! ಯಾರು ಗೊತ್ತಾ ಆಕೆ..?

ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ಆಲ್​ರೌಂಡರ್​​​ ಬ್ರಾವೋ ಅಂದ್ರೆ ಸಾಕು, ಅಲ್ಲಿ ಫುಲ್ ಎಂಟರ್​ಟೈನ್​ಮೆಂಟ್​ ಇರುತ್ತೆ. ಮೈದಾನದಲ್ಲಿ ಕ್ರಿಕೆಟ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ರೆ​, ಹೊರಗೆ ಅಲ್ಬಂಮ್​ ಸಾಂಗ್ ಜೊತೆ ಜೊತೆಗೆ ಸಖತ್ ಸ್ಟೆಪ್ಸ್​​ ಹಾಕುವ ಬ್ರಾವೋ ಎಂಟರ್​​ಟೈನ್​ಮೆಂಟ್​ ನೀಡ್ತಾರೆ.​ ಇದೆಲ್ಲದರ ಹೊರತಾಗಿಯೂ ಈಗ, ತಮ್ಮ ಬಹುದಿನದ ಕನಸೊಂದನ್ನ ಜೊತೆಗಾರನ ಬಳಿ ಹೇಳಿಕೊಂಡಿದ್ದಾರೆ.

ಬ್ರಾವೋ ಭಜ್ಜಿ ಬಳಿ ಹೇಳಿದ್ದೇನು..?
ಸದ್ಯ ಚೆನ್ನೈ ಸೂಪರ್​ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬ್ರಾವೋ, ಬಾಲಿವುಡ್​​ ಬೆಡಗಿ ದೀಪಿಕಾ ಪಡುಕೋಣೆಗೆ ಕ್ಲೀನ್ ಬೌಲ್ಡ್​ ಆಗಿದ್ದಾರೆ. 2006 ರ ಚಾಂಪಿಯನ್ಸ್​​ ಟ್ರೋಫಿಯ ವೇಳೆ ಭಾರತಕ್ಕೆ ಬಂದಿದ್ದ ಬ್ರಾವೋ, ದೀಪಿಕಾ ಲುಕ್​ಗೆ ಫಿದಾ ಆಗಿದ್ರಂತೆ. ಈ ಸುಂದರಿಯನ್ನು ಕಾಣುವ ಸಲುವಾಗಿ ಹೋಟೆಲ್​ನೆಲ್ಲಾ ಹುಡುಕ್ಕಿದ್ದ ವಿಂಡೀಸ್​ ಕ್ರಿಕೆಟರ್,​​​ ನಂತರ ಟಿ.ವಿ ಯಲ್ಲಿ ದೀಪಿಕಾರನ್ನು ನೋಡೋದಕ್ಕೆ ಕಾದು ಕುಳಿತಿದ್ರಂತೆ.

ಅಲ್ಲಿಂದ ಇಲ್ಲಿಯವರೆಗೂ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ, ವಿಂಡೀಸ್​​​ ಕ್ರಿಕೆಟರ್​​ ತಲೆಯಲ್ಲೇ ಕೊರೆಯುತ್ತಿದ್ದಾರೆ. ಹೇಗಾದ್ರು ಆಕೆಯನ್ನು ಮೀಟ್​​ ಮಾಡಬೇಕು, ಮಾತನಾಡಬೇಕು, ಅವರ ಜೊತೆ ಚಾಟ್ ಮಾಡಬೇಕು ಅಂತ ಮನಸ್ಸು ಹಂಬಲಿಸುತ್ತಿದೆಯಂತೆ. ಈ ವಿಷಯವನ್ನು ತಮ್ಮ ಟೀಮ್​​ಮೇಟ್​​ ಹರ್ಭಜನ್ ಸಿಂಗ್​ ಬಳಿ ಹೇಳಿಕೊಂಡಿರುವ ಬ್ರಾವೋ ಆಕೆಯನ್ನು ಭೇಟಿಯಾಗಿ ಮಾತನಾಡುವುದು ನನ್ನ ಕನಸಾಗಿದೆ ಎಂದಿದ್ದಾರೆ.

deepika padukone out of the top 10 highest paid actress in the world - kannada news

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍