ಕೊಹ್ಲಿ ಕಿವಿಗೆ ಗಾಯ ಮಾಡಿದ ಅಭಿಮಾನಿಗಳು..!

ದೆಹಲಿಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಬುಧವಾರವಷ್ಟೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ ಅನಾವರಣಗೊಂಡಿತ್ತು. ಗುರುವಾರ ಮೇಣದ ಪ್ರತಿಮೆಯನ್ನು ಅಭಿಮಾನಿಗಳು ಹಾಳು ಮಾಡಿದ್ದಾರೆ.

ಅತಿ ಉತ್ಸಾಹದಲ್ಲಿದ್ದ ಅಭಿಮಾನಿಗಳ ನೂಕುನುಗ್ಗಲಿಗೆ ಕೊಹ್ಲಿ ಮೇಣದ ಪ್ರತಿಮೆ ಕಿವಿಗೆ ಹಾನಿಯಾಗಿದೆ. ಪ್ರತಿಮೆ ಅನಾವರಣಗೊಳ್ಳುವ ವೇಳೆ ಸರಿಯಾಗಿಯೇ ಇತ್ತು. ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ವಿಶೇಷ ನಿಯಮವೇನಿಲ್ಲ. ಅಭಿಮಾನಿಗಳೆಲ್ಲ ಪ್ರತಿಮೆ ಬಳಿ ನಿಂತು ಫೋಟೋ ತೆಗೆಸಿಕೊಳ್ಳಬಹುದು. ಕೊಹ್ಲಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಎಲ್ಲರೂ ಮುಂದಾಗಿದ್ದಾರೆ. ಆಗ ಕೊಹ್ಲಿ ಕಿವಿಗೆ ಹಾನಿಯಾಗಿದೆ.

ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ಸಿಬ್ಬಂದಿ ಕಿವಿಯನ್ನು ಸರಿ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಯಾವುದೇ ಪ್ರತಿಮೆಗೆ ಹಾನಿಯಾದ ಸುದ್ದಿ ವರದಿಯಾಗಿರಲಿಲ್ಲ. ಕೊಹ್ಲಿ ಪ್ರೇಮಿಗಳ ಸಂಖ್ಯೆ ಹೆಚ್ಚಿದ್ದು, ಎಲ್ಲರೂ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದೇ ಇದಕ್ಕೆ ಕಾರಣವಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..