ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಕ್ಯಾಪ್ಟನ್ ಕೂಲ್..!! ಪತ್ನಿಯ ಗಂಭೀರ ಆರೋಪದ ನಡುವೆಯೂ ಧೋನಿ ಹೀಗಂದ್ರು..

dhoni-backsup-shami-against-hasin-jahan's-allegations - kannadanaadi

ರಾಂಚಿ(ಮಾ.13): ಮೊಹಮ್ಮದ್ ಶಮಿ, ಪತ್ನಿ ಹಸೀನಾ ಜಹಾನ್ ನಡುವಿನ ವೈಮನಸ್ಸು ತಾರಕಕ್ಕೇರಿದ್ದು, ಜಹಾನ್ ಶಮಿ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ವಿವಾಯೇತರ ಸಂಬಂಧ, ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ತನ್ನ ಮೇಲೆ ಶಮಿ ಹಾಗೂ ಆತತ ಕುಟುಂಬ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಪತ್ನಿ ಹಸೀನ್​ ಜಹಾನ್​ ಮಾಡಿರುವ ಆರೋಪಗಳು ಗಂಭೀರವಾಗಿವೆ. ಆದ್ದರಿಂದ ಮೊಹಮ್ಮದ್​ ಶಮಿಗೆ ಬೆಂಬಲಿಸೋದು ಹೇಗೆ ಎಂದು ಎಲ್ಲ ಸ್ನೇಹಿತ ಕ್ರಿಕ್ಕೆಟಿಗರಲ್ಲಿ ಪ್ರಶ್ನೆ ಮೂಡಿದೆ. ಇಂತಹ ಸಂದರ್ಭದಲ್ಲಿ ಕೆಲವರಷ್ಟೇ ಶಮಿ ಕುರಿತು ಇರುವ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ವೇಗಿ ಶಮಿ ಬೆಂಬಲಕ್ಕೆ ನಿಂತಿದ್ದಾರೆ. ‘ನಾನು ಕಂಡಂತೆ ಶಮಿ ಒಬ್ಬ ಉತ್ತಮ ಮನುಷ್ಯ. ಅವರು ಪತ್ನಿಗೆ ಹಾಗೂ ದೇಶಕ್ಕೆ ಮೋಸ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಇದು ಶಮಿ ವೈಯುಕ್ತಿಕ ಜೀವನದ ಸಮಸ್ಯೆ, ಹಾಗಾಗಿ ಇದರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಅಲ್ಲದೇಒಬ್ಬ  ಶ್ರೇಷ್ಠ ಕ್ರಿಕೆಟರ್​ ಆಗಿರುವ ಶಮಿ ಆಟದ ಮೇಲೆ ತಮ್ಮ ಗಮನ ಕೇಂದ್ರೀಕರಿಸಬೇಕು ಅಂತಾನೂ ಧೋನಿ ಅಭಿಪ್ರಾಯಪಟ್ಟಿದ್ದಾರೆ.

dhoni-backsup-shami-against-hasin-jahan's-allegations - kannadanaadi

ಈ ಮೊದಲು ಕೂಡಾ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ಚೇತನ್ ಚೌಹ್ಹಾಣ್ ಸೇರಿದಂತೆ ಅನೇಕ ಕ್ರಿಕೆಟಿಗರು ಶಮಿ ಬೆಂಬಲಕ್ಕೆ ನಿಂತಿದ್ದರು. ಪತ್ನಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಶಮಿ, ಒಂದು ವೇಳೆ ಸಾಯುತ್ತೇನೆಯೇ ಹೊರತು ದೇಶಕ್ಕೆ ಮೋಸ ಮಾಡುವುದಿಲ್ಲ ಎಂದು ಹೇಳಿದ್ದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍