ಕನ್ನಡಿಗ ಕೆ.ಎಲ್ ರಾಹುಲ್ ಆಟಕ್ಕೆ ಪಾಂಡ್ಯ ಫುಲ್ ಫಿದಾ..! ಆಟ ಮುಗಿಯುತ್ತಿದ್ದಂತೆ ಇಬ್ಬರೂ ಏನ್ ಮಾಡಿದ್ರು ? ಈ ವೀಡಿಯೋ ನೋಡಿ..

ಐಪಿಎಲ್ ಅಂದ್ರೇನೆ ಹಾಗೆ, ಹಲವು ವಿಶೇಷತೆಗಳಿಂದ ಕೂಡಿರುತ್ತೆ. ಗ್ರೌಂಡ್​​​ನಲ್ಲಿ ಪರಸ್ಪರ ಎದುರಾಳಿಗಳಾಗಿದ್ರು, ಆಟ ಬಳಿಕ ಕುಚುಕುಗಳಾಗ್ತಾರೆ. ಇದಕ್ಕೆ ಪೂರಕವೆಂಬಂತೆ ಮೊನ್ನೆಷ್ಟೇ ಆರ್​​ಸಿಬಿಯ ಬೌಲಿಂಗ್ ಕೋಚ್ ಆಶೀಶ್ ನೆಹ್ರಾ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್​​ ತಂಡದ ಯುವರಾಜ್​ ಸಿಂಗ್ ಮೈದಾನದಲ್ಲಿ ಡ್ಯಾನ್ಸ್​​ ಮಾಡಿ, ತಂಡ ಬದಲಾದರೂ ತಮ್ಮಿಬ್ಬರ ಸ್ನೇಹ ಬದಲಾಗಿಲ್ಲ ಎನ್ನುವುದನ್ನ ತೋರಿಸಿಕೊಟ್ಟಿದ್ದರು. ಇದೀಗ ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಕುಚುಕುಗಳಾಗಿದ್ದಾರೆ.

ಟೀಮ್​​​​​ನ ಜರ್ಸಿ ಎಕ್ಸ್​​​ಚೇಂಜ್
ಹೌದು, ಮುಂಬೈ ತಂಡದಲ್ಲಿರುವ ಹಾರ್ದಿಕ್ ಪಾಂಡ್ಯ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕನ್ನಡಿಗ ಕೆ.ಎಲ್ ರಾಹುಲ್ ಜರ್ಸಿ ಎಕ್ಸ್​​​ಚೇಂಜ್ ಮಾಡಿಕೊಂಡಿದ್ದಾರೆ. ನಿನ್ನೆ ಪಂಜಾಬ್ ತಂಡದ ಗೆಲುವಿಗಾಗಿ ಅಂತಿಮ ಕ್ಷಣದವರೆಗೂ ಹೋರಾಡಿದ ರಾಹುಲ್, ಸೊಗಸಿನ ಆಟಕ್ಕೆ ಎದುರಾಳಿ ಹಾರ್ದಿಕ್ ಪಾಂಡ್ಯ ಕೂಡ ಮನಸೋತರು. ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಪರಸ್ಪರ ಜೆರ್ಸಿ ಬದಲಿಸಿಕೊಂಡು ಕ್ರೀಡಾಸ್ಪೂರ್ತಿ ಮೆರೆದರು.

ಈ ಪಂದ್ಯದಲ್ಲಿ ರಾಹುಲ್ 60 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸ್​​​ಗಳ ನೆರವಿನಿಂದ 94 ರನ್​​ ಸಿಡಿಸಿ ಕೇವಲ 6 ರನ್​​ಗಳಿಂದ ಶತಕ ವಂಚಿತರಾದ್ರು.

ವೀಡಿಯೋ ನೋಡಿ :

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍