ಫೀಫಾ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಪಾಂಡ್ಯ ಮತ್ತು ಧವನ್..! ಇಲ್ಲಿದೆ ವೈರಲ್ ವೀಡಿಯೋ

ಲಂಡನ್: ಟಿ-20 ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರೋ ಟೀಂ ಇಂಡಿಯಾ, ಓಲ್ಡ್ ಟ್ರಾಫೋರ್ಡ್‌ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದೆ. ಪ್ರಾಕ್ಟೀಸ್ ಜೊತೆ ಜೊತೆಯಲ್ಲೇ ಯಂಗ್ ಟೀಮ್ ಫುಲ್ ಎಂಜಾಯ್ ಕೂಡ ಮಾಡ್ತಿದೆ.

ಅಭ್ಯಾಸದ ಬಳಿಕ ಟೀಂ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ಸೂಪರ್ ಡ್ಯಾನ್ಸ್ ಮಾಡಿದ್ದಾರೆ. ಜಗತ್ತೇ ಫಿಫಾ ಪುಟ್​ಬಾಲ್ ವರ್ಲ್ಡ್​ಕಪ್​ನ ಗುಂಗಿನಲ್ಲಿದೆ. ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್​ಗೂ ಫುಟ್ಬಾಲ್ ಫಿವರ್ ಹೆಚ್ಚಾಗಿದ್ದು, ಫಿಫಾದ ಅಫಿಷಯಲ್ ಸಾಂಗ್​​ ‘ಲಿವ್ ಇಟ್ ಅಪ್’ ಹಾಡಿಗೆ ಸಕತ್ತಾಗೆ ಸ್ಟೆಪ್ಸ್ ಹಾಕಿದ್ದಾರೆ.

ಇಬ್ಬರೂ ಡ್ಯಾನ್ಸ್ ಮಾಡ್ತಿರೋ ವಿಡಿಯೋವನ್ನು ಹಾರ್ದಿಕ್ ಪಾಂಡ್ಯ ತಮ್ಮ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ವಿ ಲವ್ ಡ್ಯಾನ್ಸಿಂಗ್ ಅಂಡ್ ಸಿಂಗಿಂಗ್ ಅಂತ ಟ್ಯಾಗ್ ಲೈನ್ ಕೂಡ ನೀಡಿದ್ದಾರೆ. ಪಾಂಡ್ಯ ಹಾಗೂ ಶಿಖರ್ ಧವನ್ ಅದ್ಭುತ ಡ್ಯಾನ್ಸ್​ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಜುಲೈ 03 ರಿಂದ ಭಾರತ ಇಂಗ್ಲೆಂಡ್ ವಿರುದ್ಧ 2 ಟಿ-20 ಪಂದ್ಯಗಳನ್ನ ಆಡಲಿದೆ. ಬಳಿಕ 3 ಏಕದಿನ ಹಾಗೂ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..