ಶಮಿಯ ಮತ್ತೊಂದು ಬಂಡವಾಳ ಬಯಲು..! ಮೊಹಮ್ಮದ್​ ಶಮಿ ಕ್ರಿಕೆಟ್ ಬದುಕಿಗೆ ಬ್ರೇಕ್​..?​

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್​​ ಶಮಿ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಪತ್ನಿ ಹಸೀನ್ ಜಹಾನ್,​ ಶಮಿಯ ಮತ್ತೊಂದು ಬಂಡವಾಳವನ್ನು ಬಯಲಿಗೆಳೆದಿದ್ದಾರೆ. ಅತ್ಯಾಚಾರ, ಕೊಲೆ ಯತ್ನ ಫಿಕ್ಸಿಂಗ್​ನಂತಹ ಗಂಭೀರ ಆರೋಪ ಮಾಡಿದ್ದ ಜಹಾನ್,​ ಶಮಿ ಬಿಸಿಸಿಐಗೆ ಸುಳ್ಳು ಏಜ್ ಪ್ರೂಫ್​​ ನೀಡಿದ್ದಾರೆ ಎಂದಿದ್ದಾರೆ.

ಏಜ್ ಫ್ರೂಪ್ ಬಿಡುಗಡೆ ಮಾಡಿದ ಜಹಾನ್
ಮೊಹಮ್ಮದ್​ ಶಮಿ ತಮ್ಮ ಏಜ್ ಪ್ರೂಫ್​​​ ಬಗ್ಗೆ ಬಿಸಿಸಿಐಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮತ್ತೊಂದು ಬಾಂಬ್ ಸಿಡಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಹಸೀನ್ ಜಹಾನ್​ ಏಜ್​ ಪ್ರೂಫ್​​​ ದಾಖಲೆ  ಒಂದನ್ನು ಬಿಡುಗಡೆ ಮಾಡಿದ್ದಾರೆ. ಇದರಿಂದಾಗಿ ಶಮಿಯ ಕ್ರಿಕೆಟ್​ ಬದುಕಿಗೆ ಕುತ್ತು ಬರುವ ಅಪಾಯ ಎದುರಾಗಿದೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಈ ಹಿಂದೆ ಆಟಗಾರರ ವಯಸ್ಸಿನ ಮಾಹಿತಿ ನೀಡುವ ಬಗ್ಗೆ ಮಾತನಾಡಿದ್ದ ದಿ ವಾಲ್​ ಖ್ಯಾತಿಯ ರಾಹುಲ್ ದ್ರಾವಿಡ್​​, ಸುಳ್ಳು ಏಜ್ ಪ್ರೂಫ್​​ ನೀಡೋದು ಮ್ಯಾಚ್​ ಫಿಕ್ಸಿಂಗ್ ಮಾಡಿದಷ್ಟೇ ದೊಡ್ಡ ಅಪರಾಧ ಎಂದು ಹೇಳಿದ್ದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍