ಕಬಡ್ಡಿ ಮಾಸ್ಟರ್ಸ್​ ಲೀಗ್ : ಬದ್ಧವೈರಿ ಪಾಕಿಸ್ತಾನವನ್ನು​ ಬಗ್ಗುಬಡಿದ ಭಾರತ..!

ದುಬೈ: ಸ್ಟಾರ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನ ಸಹಯೋಗದೊಂದಿಗೆ ಮತ್ತು ದುಬೈ ಸ್ಪೋರ್ಟ್ಸ್‌ ಕೌನ್ಸಿಲ್‌ನ ಸಹಕಾರದೊಂದಿಗೆ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ ಆರು ದೇಶಗಳ ನಡುವಿನ 6 ರಾಷ್ಟ್ರಗಳ ಕಬ್ಬಡ್ಡಿ ಮಾಸ್ಟರ್ಸ್​ ಲೀಗ್​ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ 36-20 ಅಂಕಗಳಿಂದ ಜಯಗಳಿಸೋ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 8 ರೈಡ್​ ಪಾಯಿಂಟ್​ ದೋಚಿದ ನಾಯಕ ಅಜಯ್​ ಠಾಕೂರ್​ ಭರ್ಜರಿ ರೈಡ್​ ಮೂಲಕ ಭಾರತದ ಜಯಕ್ಕೆ ಮುನ್ನುಡಿ ಬರೆದರು. ​ಇನ್ನು, ಭಾರತದ ಬಲಿಷ್ಟ ರೈಡ್​ ಮತ್ತು ಟ್ಯಾಕಲ್​ಗಳ ಮುಂದೆ ಬದ್ಧವೈರಿ ಪಾಕಿಸ್ಥಾನ ಎರಡು ಬಾರಿ ಆಲೌಟ್​ ಆಗಿ ನಂತರ ಸೋಲಿಗೆ ಶರಣಾಗಬೇಕಾಯಿತು.

ಪಂದ್ಯದ ಮೊದಲಾರ್ಧದಲ್ಲಿ 22-9 ಅಂಕಗಳಿಂದ ಮುಂದಿದ್ದ ಭಾರತ ದ್ವಿತೀಯಾರ್ಧದಲ್ಲಿ ತನ್ನ ಆಟವನ್ನು ಮತ್ತಷ್ಟು ಚುರುಕುಗೊಳಿಸಿತು. ಭಾರತದ ಪರವಾಗಿ ರೈಡರ್​ಗಳಾದ ಅಜಯ್​ ಠಾಕೂರ್​, ರೋಹಿತ್​ ಕುಮಾರ್​, ರಾಹುಲ್​ ಚೌಧರಿ, ಪ್ರದೀಪ್​ ನರ್ವಾಲ್​ರ ರೈಡ್​ಗೆ ಪಾಕಿಸ್ತಾನದ ಡಿಫೆಂಡರ್ಸ್​ ಬಳಿ ಉತ್ತರವೇ ಇರಲಿಲ್ಲ.

ಸಂಪೂರ್ಣ ಏಕಪಕ್ಷೀಯವಾಗಿ ಸಾಗಿದ್ದ ಪಂದ್ಯದಲ್ಲಿ ಭಾರತ ಸುಲಭವಾಗಿ ಜಯಗಳಿಸಿತು. ಭಾರತ 15 ರೈಡ್​ ಮತ್ತು 12 ಟ್ಯಾಕಲ್​ ಪಾಯಿಂಟ್ಸ್​ ಗಳಿಸಿದರೆ, ಪಾಕ್​ ಕೇವಲ 9 ರೈಡ್​ ಮತ್ತು 8 ಟ್ಯಾಕಲ್​ ಪಾಯಿಂಟ್ಸ್​ ಗಳಿಸಿಕೊಂಡಿತು. ಇನ್ನು, ಇಂದು ನಡೆಯುವ ಪಂದ್ಯದಲ್ಲಿ ಭಾರತ ಕೀನ್ಯಾ ತಂಡವನ್ನು ಎದುರಿಸಲಿದೆ. ಸ್ಟಾರ್​ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಮತ್ತು ದುಬೈ ಸ್ಪೋರ್ಟ್ಸ್ ಕೌನ್ಸಿಲ್​ನ ಸಹಯೋಗದಲ್ಲಿ ಕಬ್ಬಡ್ಡಿ ಮಾಸ್ಟರ್ಸ್​ ಲೀಗ್ ಆಯೋಜಿಸಲಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..