ರೋಹಿತ್​ ‘ವಿರಾಟ’ ರೂಪ.. ಕುಲದೀಪ್ ಯಾದವ್ ಸ್ಪಿನ್ ಮೋಡಿ.. : ಮೊದಲ ಏಕದಿನ ಪಂದ್ಯದಲ್ಲಿ ಆಂಗ್ಲರನ್ನ ದೂಳೀಪಟ ಮಾಡಿದ ಕೊಹ್ಲಿ ಸೈನ್ಯ..!

ಟ್ರೆಂಟ್​ ಬ್ರಿಡ್ಜ್​: ಇಂಗ್ಲೆಂಡ್‌ ವಿರುದ್ಧ ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿದೆ. ಆರಂಭಿಕ ರೋಹಿತ್‌ ಶರ್ಮಾ ಅವರ ಅಮೋಘ ಶತಕದ ನೆರವಿನಿಂದ ಭಾರತ, ಇಯಾನ್‌ ಮಾರ್ಗನ್‌ ಪಡೆಯನ್ನು 8 ವಿಕೆಟ್‌ಗಳ ಅಂತರದಿಂದ ಮಣಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಆಂಗ್ಲನ್ನರು 49.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೆೊಂಡು 268 ರನ್‌ ಪೇರಿಸಲಷ್ಟೇ ಸಾಧ್ಯವಾಯಿತು.

ಸ್ಪಿನ್ನರ್‌ ಕುಲ್ದೀಪ್‌ ಅವರ ಬೌಲಿಂಗ್‌ ಬಲೆಗೆ ಸಿಲುಕಿದ ಇಂಗ್ಲೆಂಡ್‌ ತಂಡ ಪೆವಿಲಿಯನ್‌ ಪರೇಡ್‌ ನಡೆಸಿತು. ಜೋಸ್‌ ಬಟ್ಲರ್‌, ಆಲ್​​ರೌಂಡರ್​ ಬೆನ್​ ಸ್ಟೋಕ್ಸ್​ ಅರ್ಧ ಶತಕಗಳ ನೆರವಿನಿಂದ 268 ರನ್‌ಗಳಿಸಿತು. ಭಾರತ ಪರ ಕುಲ್ದೀಪ್‌ 10 ಓವರ್‌ಗಳಲ್ಲಿ 25 ರನ್‌ ನೀಡಿ ಪ್ರಮುಖ 6 ವಿಕೆಟ್‌ ಪಡೆದ್ರು.

Cricket – England v India – First One Day International – Trent Bridge, Nottingham, Britain – July 12, 2018 India’s Rohit Sharma in action Action Images via Reuters/Peter Cziborra

ರೋಹಿತ್​ ‘ವಿರಾಟ’ ರೂಪ
269 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಆರಂಭಿಕ ಶಿಖರ್​ ಧವನ್​ ವೇಗವಾಗಿ ಬ್ಯಾಟ್​ ಬೀಸಿ 40 ರನ್​ ಕಲೆ ಹಾಕಿ ಬೇಗ ಪೆವಿಲಿಯನ್‌ ಸೇರಿಕೊಂಡ್ರು. ಬಳಿಕ ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ಹಾಗೂ ಕ್ಯಾಪ್ಟನ್​ ಕೊಹ್ಲಿ ಜೋಡಿ ಉತ್ತಮ ರನ್‌ ಪೇರಿಸಿತು.

ಅಬ್ಬರದ ಬ್ಯಾಟಿಂಗ್‌ ಮಾಡಿದ ರೋಹಿತ್‌, 114 ಎಸೆತಗಳಲ್ಲಿ 15 ಬೌಂಡರಿ ಹಾಗೂ 4 ಸಿಕ್ಸರ್‌ ಸೇರಿದಂತೆ 137 ರನ್​ ಪೇರಿಸಿದ್ರು. ಆ ಮೂಲಕ 18ನೇ ಶತಕ ಗಳಿಸಿದ ಹಿರಿಮೆಗೆ ಪಾತ್ರರಾದರೆ, ಕ್ಯಾಪ್ಟನ್​ ಕೊಹ್ಲಿ ತಮ್ಮ 47ನೇ ಅರ್ಧ ಶತಕ ದಾಖಲಿಸಿ 75 ರನ್​ ಕಲೆ ಹಾಕಿ ಅದಿಲ್​ ರಶೀದ್​ಗೆ ವಿಕೆಟ್​ ಒಪ್ಪಿಸಿದರು. ನಂತರ ರೋಹಿತ್​ ಜೊತೆಗೂಡಿದ ಕನ್ನಡಿಗ ಕೆ.ಎಲ್​.ರಾಹುಲ್​ ಗೆಲುವಿನ ರನ್​ ಬಾರಿಸುವ ಮೂಲಕ ತಂಡಕ್ಕೆ ಜಯ ತಂದಿತ್ತರು. ಜೀವನ ಶ್ರೇಷ್ಠ ಪ್ರದರ್ಶನ ತೋರಿದ ಕುಲ್ದೀಪ್‌​ ಯಾದವ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

ಹೈಲೈಟ್ಸ್ ವೀಡಿಯೋ ಇಲ್ಲಿ ನೋಡಿ..

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..