ಕನ್ನಡಿಗ ಕೆ.ಎಲ್ ರಾಹುಲ್, ಕುಲ್ದೀಪ್ ಯಾದವ್ ಮಿಂಚು : ಮೊದಲ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡ ಭಾರತ..!

ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಶುಭಾರಂಭ ಮಾಡಿದೆ. ನಿನ್ನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಅತಿಥೇಯ ಇಂಗ್ಲೆಂಡ್ ವಿರುದ್ಧ ಕೊಹ್ಲಿ ಪಡೆ ಭರ್ಜರಿ ಜಯಗಳಿಸಿದೆ. ಚೈನಾ ಮ್ಯಾನ್ ಸ್ಪಿನ್ ಮೋಡಿಗೆ ತತ್ತರಿಸಿದ್ದ ಕ್ರಿಕೆಟ್ ಜನಕರಿಗೆ ದಾಂಡಿಗ ಕೆ.ಎಲ್ ರಾಹುಲ್ ಚೇತರಿಸಿಕೊಳ್ಳುವ ಅವಕಾಶವನ್ನೂ ಕೊಡಲಿಲ್ಲ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬ್ಲೂ ಬಾಯ್ಸ್, ಅತಿಥೇಯ ಇಂಗ್ಲೆಂಡ್ ಅನ್ನ 159 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯ್ತು. ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಮರುಳಾದ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಪೆವಿಲಿಯನ್ ಪರೇಡ್ ನಡೆಸಿದ್ರು. ವಿಕೆಟ್ ಕೀಪರ್ ಜಾಸ್ ಬಟ್ಲರ್ 69 ರನ್, ಆರಂಭಿಕ ಜೇಸನ್ ರಾಯ್ 30 ಹಾಗೂ ಡೇವಿಡ್ ವಿಲ್ಲೆ 29 ರನ್ ಗಳಿಸಿದ್ದು ಬಿಟ್ಟರೆ, ಮಿಕ್ಕ ಬ್ಯಾಟ್ಸ್​ಮನ್​ಗಳು ಎರಡಂಕಿಯನ್ನು ದಾಟಲೂ ಸಾಧ್ಯವಾಗಲಿಲ್ಲ.

Manchester : India’s Kuldeep Yadav, centre, celebrates taking the wicket of England’s Joe Root during the Twenty20 cricket match between England and India at Old Trafford cricket ground in Manchester, England, Tuesday, July 3, 2018. AP/ PTI(AP7_3_2018_000263B)

ಭಾರತದ ಪರ ಅದ್ಭುತ ಸ್ಪೆಲ್ ಮಾಡಿದ ಕುಲ್​ದೀಪ್ ಯಾದವ್, 4 ಓವರ್​ಗಳಲ್ಲಿ 24 ರನ್ ನೀಡಿ 5 ವಿಕೆಟ್ ಕಬಳಿಸಿದ್ರು. ಉಮೇಶ್ ಯಾದವ್ 2 ಹಾಗೂ ಹಾರ್ದಿಕ್ ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದ್ರು. ಅಂತಿಮವಾಗಿ ಇಂಗ್ಲೆಂಡ್ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 159ರನ್ ಗಳಿಸಲಷ್ಟೇ ಶಕ್ತವಾಯ್ತು.

ಟಾರ್ಗೆಟ್ ಬೆನ್ನತ್ತಿದ ಭಾರತ ಕೆ.ಎಲ್. ರಾಹುಲ್​ರ ಅಬ್ಬರದ ಶತಕದ ನೆರವಿನಿಂದ 18.2 ಓವರ್​ಗಳಲ್ಲೇ ಗೆಲುವಿನ ಕೇಕೆ ಹಾಕಿತು. ಕೊಹ್ಲಿ ಪಡೆಗೆ ಆರಂಭದಲ್ಲೇ ಆಘಾತ ಎದುರಾಯ್ತು. ಕೇವಲ 4 ರನ್ ಗಳಿಸಿದ್ದ ಶಿಖರ್ ಧವನ್ ವಿಲ್ಲೆ ಬೌಲಿಂಗ್​ನಲ್ಲಿ ಬೋಲ್ಡ್ ಆಗಿ ಪೆವಿಲಿಯನ್​ಗೆ ಮರಳಿದ್ರು. ನಂತರ ರೋಹಿತ್ ಶರ್ಮಾ ಜೊತೆಗೂಡಿದ ಕೆ.ಎಲ್. ರಾಹುಲ್ ಉತ್ತಮ ಜೊತೆಯಾಟ ನೀಡಿದ್ರು. ರೋಹಿತ್ ಶರ್ಮಾ 1 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನೊಂದಿಗೆ 32 ರನ್ ಗಳಿಸಿ ಔಟಾದ್ರು.

ನಂತರ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿದ ರಾಹುಲ್ ತಮ್ಮ ಅಬ್ಬರದ ಆಟ ಮುಂದುವರಿಸಿದ್ರು. 5 ಸಿಕ್ಸರ್ ಹಾಗೂ 10 ಬೌಂಡರಿ ನೆರವಿನಿಂದ ರಾಹುಲ್ ಕೇವಲ 54 ಎಸೆತಗಳಲ್ಲಿ 101 ರನ್ ಗಳಿಸಿದ್ರು. ರಾಹುಲ್​ಗೆ ಉತ್ತಮ ಸಾಥ್ ನೀಡಿದ ಕೊಹ್ಲಿ, 1 ಬೌಂಡರಿ ಬಾರಿಸಿ 20 ರನ್ ಗಳಿಸಿದ್ರು. ಇಂಗ್ಲೆಂಡ್ ಪರ ಡೇವಿಡ್ ವಿಲ್ಲೆ ಹಾಗೂ ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದ್ರು.

ಅದ್ಭುತ ಬೌಲಿಂಗ್​ನಿಂದ ಕ್ರಿಕೆಟ್ ಜನಕರನ್ನ ಕಟ್ಟಿಹಾಕಿದ ಕುಲ್​ದೀಪ್ ಯಾದವ್ ಮ್ಯಾನ್ ಆಫ್ ದ ಮ್ಯಾಚ್ ಗೌರವಕ್ಕೆ ಪಾತ್ರರಾದ್ರು.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..