ಕೌಂಟರ್ ನಲ್ಲಿ ಸಿಗಬೇಕಾದ ಐಪಿಎಲ್ ಟಿಕೆಟ್, ಬಿಕರಿಯಾಗ್ತಿರೋದು ಮಾತ್ರ ಸುಲಭ ಶೌಚಾಲಯಗಳಲ್ಲಿ ಅಂದ್ರೆ ನೀವು ನಂಬಲೇಬೇಕು..!!

ಬೆಂಗಳೂರು: ಅದೇನೋ ಈ ಬಾರಿ ಹೆಚ್ಚಿನ ಜನರು ಐಪಿಲ್ ಟಿಕೆಟ್ ಸಿಗುತ್ತಿಲ್ಲ ಅಂತಾ ಹೇಳುತ್ತಿದ್ದಾರೆ. ಐಪಿಎಲ್ ಟಿಕೆಟ್‍ಗಳ ಕೃತಕ ಅಭಾವ ಉಂಟಾಗಲು ಕಾರಣ ಏನು ಅನ್ನೋದನ್ನ ಬೆನ್ನತ್ತಿ ಹೋದ ಪಬ್ಲಿಕ್ ಟಿವಿಗೆ ಕಾಳಸಂತೆಯಲ್ಲಿ ಟಿಕೆಟ್ ಬಿಕರಿಯಾಗೋದು ತಿಳಿದುಬಂದಿದೆ.

ಸಾಕಷ್ಟು ಜನರು ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ಮ್ಯಾಚ್ ನೋಡಬೇಕೆಂದು ಇಷ್ಟಪಡ್ತಾರೆ. ಆದ್ರೆ ಕೌಂಟರ್ ತೆರೆದ ಕೆಲವೇ ಗಂಟೆಗಳಲ್ಲಿಯೇ ನೋ ಟಿಕೆಟ್ ಅಂತಾ ಬೋರ್ಡ್ ಹಾಕಲಾಗುತ್ತದೆ. ಇದರಿಂದ ಮಾರುದ್ದ ಕ್ಯೂನಲ್ಲಿ ನಿಂತ ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಸೆಯಿಂದ ಹಿಂದಿರುಗುತ್ತಾರೆ.

ಇನ್ನೇನು ಗೇಮ್ ಸ್ಟಾರ್ಟ್ ಆಗೋಕೆ ಐದು ನಿಮಿಷ ಇದೆ ಅಂದಾಗ ಹೋದ್ರೆ ಸ್ಟೇಡಿಯಂ ಸುತ್ತಲಿನ ಅಂಗಡಿಗಳಲ್ಲಿ ಟಿಕೆಟ್ ಸಿಗುತ್ತದೆ. 800 ರೂಪಾಯಿಯ ಟಿಕೆಟ್‍ಗೆ ಮೂರರಿಂದ ಆರು ಸಾವಿರದ ತನಕ ಗಿರಾಕಿಗಳ ಮುಖ ನೋಡ್ಕೊಂಡ್ ಟೋಪಿ ಹಾಕ್ತಾರೆ. ಇವರ ಬಳಿ ಎಲ್ಲಾ ಮುಖಬೆಲೆಯ ಟಿಕೆಟ್‍ಗಳು ಸಿಗುತ್ತೆ, ಆದ್ರೆ ಮೂಲಬೆಲೆಗಿಂತ ನಾಲ್ಕೈದು ಪಟ್ಟು ಹೆಚ್ಚಿಗೆ ದುಡ್ಡು ಕೊಟ್ರೇನೇ ಸಿಗೋದು. ಅಂದಹಾಗೆ ಈ ಟಿಕೆಟ್‍ಗಳು ಸಿಗೋದು ಕಬ್ಬನ್ ಪಾರ್ಕ್ ನ ಮ್ಯೂಸಿಯಮ್ ಎದುರುಗಡೆ ಇರೊ ಫ್ರೂಟ್ ಸ್ಟಾಲ್‍ಗಳು ಮತ್ತು ಸುಲಭ ಶೌಚಾಲಯಗಳಲ್ಲಿ. ಅಲ್ಲದೇ ಮತ್ತೊಬ್ಬ ಯುವಕ ಅನಿಲ್ ಕುಂಬ್ಳೆ ಸರ್ಕಲ್‍ನಲ್ಲಿ ಟಿಕೆಟ್‍ಗಳ ವ್ಯಾಪಾರ ಮಾಡೋದು ಪಬ್ಲಿಕ್ ಟಿವಿಯ ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಸ್ಟೇಡಿಯಂನವರ ಸಹಕಾರ ಇಲ್ದೇ ಇವರು ಟಿಕೆಟ್ ಮಾರೋಕೆ ಸಾಧ್ಯಾನಾ..? ಬಲ್ಕ್ ಆಗಿ ಟಿಕೆಟ್ ಕೊಟ್ಟು ಹೊರಗಡೆ ಮಾರಿಸಿ ಹಣ ಮಾಡ್ಕೊಳ್ತಿದ್ದಾರೆ? ಎಂಬ ಅನುಮಾನಗಳು ದಟ್ಟವಾಗಿವೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಖಾಸಗಿ ಚ್ಯಾನೆಲ್ – ಗುರು ಎರಡು ಟಿಕೆಟ್ ಇದ್ಯಾ ?
ಬ್ಲಾಕ್ ಟಿಕೆಟ್ ಸೆಲ್ಲರ್ – ನೋ.. ನೋ.. ಅಂತಾ ತಲೆ ಅಲ್ಲಾಡಿಸುತ್ತಾ
ಖಾಸಗಿ ಚ್ಯಾನೆಲ್ – ಇಬ್ಬರೇ ಇರೋದು ನೋಡು ಗುರು..
ಬ್ಲಾಕ್ ಟಿಕೆಟ್ ಸೆಲ್ಲರ್ – ಸ್ವಲ್ಪ ದೂರದಲ್ಲೇ ಕುಳಿತಿದ್ದ ವ್ಯಕ್ತಿಯ ಕಡೆ ಕೈ ತೋರಿಸಿ ಹೋಗು ಅಂತಾನೆ
ಖಾಸಗಿ ಚ್ಯಾನೆಲ್ – ಗುರು ಟಿಕೆಟ್ ಬೇಕಾಗಿತ್ತು, ಇಬ್ಬರೇ ಇರೋದು.
ಬ್ಲಾಕ್ ಟಿಕೆಟ್ ಸೆಲ್ಲರ್ – ಎಷ್ಟು ಕೊಡ್ತೀರಾ..?
ಖಾಸಗಿ ಚ್ಯಾನೆಲ್ – 800 ರೂಪಾಯಿದು ಎರಡು ಬೇಕಾಗಿತ್ತು.
ಬ್ಲಾಕ್ ಟಿಕೆಟ್ ಸೆಲ್ಲರ್ – 6000 ಕೊಡಿ
ಖಾಸಗಿ ಚ್ಯಾನೆಲ್– ಏ ಕಡಿಮೆ ಮಾಡ್ಕೊ ಗುರು, ಇಷ್ಟೊಂದ್ ಹೇಳಿದ್ರೆ ಹೆಂಗೆ..?
ಬ್ಲಾಕ್ ಟಿಕೆಟ್ ಸೆಲ್ಲರ್ – 200 ರೂಪಾಯಿ ಕಡಿಮೆ ಕೊಡಿ
ಖಾಸಗಿ ಚ್ಯಾನೆಲ್ – ಏ ನೀನ್ ಗುರು ಇಷ್ಟೊಂದ್ ಹೇಳ್ತಿಯಾ?
ಬ್ಲಾಕ್ ಟಿಕೆಟ್ ಸೆಲ್ಲರ್ – 500 ಕಡಿಮೆ ಕೊಡಿ
ಖಾಸಗಿ ಚ್ಯಾನೆಲ್ – 800 ರೂಪಾಯಿದು ಬಿಟ್ಟು ಬೇರೆ ಯಾವುದಿದೆ ?..
ಬ್ಲಾಕ್ ಟಿಕೆಟ್ ಸೆಲ್ಲರ್ – ಯಾವುದು ಬೇಕು ನಿಮಗೆ ..?
ಬ್ಲಾಕ್ ಟಿಕೆಟ್ ಸೆಲ್ಲರ್ – 1700 ರೂಪಾಯಿದು 4000

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍