ಧೋನಿ ಒಬ್ರೇ ಅಲ್ಲ.. ಈ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ ಮನ್ ಕೂಡ ಹೊಡೀತಾರೆ ಹೆಲಿಕಾಪ್ಟರ್ ಶಾಟ್..!! ವೀಡಿಯೋ ಇಲ್ಲಿದೆ

ಹೆಲಿಕಾಪ್ಟರ್​ ಶಾಟ್​…! ಈ ಹೆಸರು ಕೇಳಿದ ಕೂಡಲೇ ಎಲ್ಲರಿಗೂ ಥಟ್​ ಅಂತ ನೆನಪಾಗೋದು ವಿಕೆಟ್​ ಕೀಪರ್​/ಬ್ಯಾಟ್ಸ್​ಮನ್​ ಮಹೇಂದ್ರಸಿಂಗ್ ಧೋನಿ.

ಆದ್ರೆ, ಇಲ್ಲಿ ಮತ್ತೊಬ್ಬ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ಈ ಶಾಟ್​​ ಬಾರಿಸುವ ಮೂಲಕ ಫೇಮಸ್​ ಆಗುತ್ತಿದ್ದಾನೆ. ವಿಶೇಷ ಅಂದ್ರೆ, ಧೋನಿ ರೈಟ್​ ಹ್ಯಾಂಡ್ ಬ್ಯಾಟ್ಸ್​ಮನ್​ ಆಗಿದ್ರೆ, ಈತ ಲೆಫ್ಟ್​ ಹ್ಯಾಂಡರ್​.

ಮುಂಬೈ ಇಂಡಿಯನ್ಸ್​ ತಂಡದ ವಿಕೆಟ್ ಕೀಪರ್ ಇಶಾನ್​ ಕಿಶನ್​ ಈ ಹೆಲಿಕಾಪ್ಟರ್​ ಶಾಟ್​ ಅನ್ನ ಕರಗತ ಮಾಡಿಕೊಂಡಿದ್ದಾರೆ. ನಿನ್ನೆಯ ಕೋಲ್ಕತ್ತ ನೈಟ್​ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್​ ಕುಲ್​ದೀಪ್​ ಯಾದವ್​ ಅವರ ಬೆವರಿಳಿಸಿರುವ ಇಶಾನ್​, ಅವರ ಎಸೆತವೊಂದರಲ್ಲಿ ಹೆಲಿಕಾಪ್ಟರ್​ ಶಾಟ್​ ಬಾರಿಸಿದ್ದಾರೆ. ಈ ಶಾಟ್​ ನೋಡಿದ ಪ್ರೇಕ್ಷಕರು, ‘ಇದೇನಪ್ಪ ಧೋನಿಯ ಹೆಲಿಕಾಪ್ಟರ್​ ಶಾಟ್ ತರಹವೇ ಇದೆ’ ಅಂತ ಚಕಿತರಾಗಿದ್ದಾರೆ.

ಇಶಾನ್​ ಕಿಶನ್​ ನಿನ್ನೆಯ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ, ಐಪಿಎಲ್​ನ ರಿಕಾರ್ಡ್​ ಲಿಸ್ಟ್​​ಗೆ ಸೇರಿದ್ದಾರೆ. ವೇಗದ ಅರ್ಧಶತಕ ಸಿಡಿಸಿದವರ ಸಾಲಿನಲ್ಲಿ, ಸುನೀಲ್​ ನರೈನ್​ ಅವರೊಂದಿಗೆ ಎರಡನೇ ಸ್ಥಾನವನ್ನ ಇಶಾನ್​ ಕಿಶನ್ ಹಂಚಿಕೊಂಡಿದ್ದಾರೆ. ವೀಡಿಯೋ ಇಲ್ಲಿದೆ :

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍