ಏಕದಿನ ಕ್ರಿಕೆಟ್ ನಲ್ಲಿ ಬರೋಬ್ಬರಿ 490 ರನ್ ಸಿಡಿಸಿ ದಾಖಲೆ ನಿರ್ಮಿಸಿದ ಕೀವೀಸ್ ಮಹಿಳಾ ತಂಡ..! ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಇದುವರೆಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ನಲ್ಲಿ ಯಾರು ಮಾಡದ ದಾಖಲೆಯೊಂದನ್ನ ನ್ಯೂಜಿಲೆಂಡ್ ಮಹಿಳೆಯರ ಕ್ರಿಕೆಟ್ ತಂಡ ಮಾಡಿದೆ. ಶುಕ್ರವಾರ ಐರ್ಲೆಂಡ್ ತಂಡದ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವು 490/4 ಸ್ಕೋರ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದೆ.

ನಾಯಕಿ ಸೂಜಿ ಬೇಟ್ಸ್ – ಮ್ಯಾಡಿ ಗ್ರೀನ್ ಮಿಂಚಿಂಗ್
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌‌ ಮಾಡಿದ್ದ ನ್ಯೂಜಿಲೆಂಡ್‌ ತಂಡದ ಪರ ನಾಯಕಿ ಸೂಜಿ ಬೇಟ್ಸ್ 94 ಎಸೆತಗಳಲ್ಲಿ 24 ಬೌಂಡರಿ, 2 ಸಿಕ್ಸರ್ ನೆರವಿನಿಂದ ಭರ್ಜರಿ 151 ರನ್ ಸಿಡಿಸಿ ಮಿಂಚಿದ್ರು. ಇನ್ನು ಜೆಸ್ ವಾಟ್ಕಿನ್ 62, ಮ್ಯಾಡಿ ಗ್ರೀನ್ 105 ಎಸೆತಗಳು 17 ಬೌಂಡರಿ 2 ಸಿಕ್ಸರ್ ಮೂಲಕ 121ರನ್ ಚಚ್ಚಿದ್ರು. ಇವರೆಲ್ಲ ಅಬ್ಬರದ ಬ್ಯಾಟಿಂಗ್​​​​ ನೆರವಿನಿಂದ ಅಂತಿಮವಾಗಿ ಕಿವೀಸ್ ನಿಗದಿತ 50 ಓವರ್‌ಗಳಲ್ಲಿ 490/4 ಸ್ಕೋರ್ ಮಾಡಿ ಹೊಸ ದಾಖಲೆ ಬರೆಯಿತು. ನ್ಯೂಜಿಲೆಂಡ್ ಮಹಿಳೆಯರ ತಂಡ ಗಳಿಸಿದ ಈ ಮೊತ್ತವು ಪುರುಷರ ತಂಡ ಸೇರಿದಂತೆ ತಂಡವೊಂದು ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಪುರುಷರ ಕ್ರಿಕೆಟ್​​​​ನಲ್ಲಿ 2016ರಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 444/3 ರನ್​​​​ಗಳಿಸಿತ್ತು. ಇದು ಅತ್ಯಧಿಕ ಮೊತ್ತವಾಗಿತ್ತು.

ನ್ನು ಮಹಿಳಾ ಕ್ರಿಕೆಟ್ ನ ಅತ್ಯಧಿಕ ಸ್ಕೋರ್ ನೋಡುವುದಾದರೆ :

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..

>
%d bloggers like this: