ಬಾಡ್ಮಿಂಟನ್​ ರಾಣಿಯರ ನಡುವೆ ಅಂತಹದ್ದೇನು..? ಸಮಸ್ಯೆ ಪರಿಹರಿಸಲು ಕೋಚ್ ಗೋಪಿಚಂದ್ ಮಾಡಿರುವ ಐಡಿಯಾ ಏನು..?

ಭಾರತದ ಬ್ಯಾಟ್​ಮಿಂಟನ್​ ರಾಣಿಯರೆಂದೇ ಖ್ಯಾತಿಗಳಿಸಿರುವ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್​​ ನಡುವೆ ಎಲ್ಲವೂ ಸರಿಯಾಗಿಲ್ವಾ ಅನ್ನೋ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪುಲೇಲಾ ಗೋಪಿಚಂದ್​ರ ಈ ಇಬ್ಬರು ಶಿಷ್ಯೆಯರು, ಬೇರೆ ಬೇರೆ​​ ಅಕಾಡೆಮಿಗಲ್ಲಿ ಟ್ರೈನಿಂಗ್​ ಪಡೆದುಕೊಳ್ತಿದ್ದಾರಂತೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋಪಿಚಂದ್, ಇದು ತರಬೇತಿ ತಂಡದ ನಿರ್ಧಾರವಾಗಿದ್ದು, ಇಬ್ಬರು ಆಟಗಾರ್ತಿಯರ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಪ್ರತ್ಯೇಕ ತರಬೇತಿ ನೀಡಿದ್ದು, ಇಬ್ಬರು ಆಟಗಾರ್ತಿಯರ ಕುರಿತು ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಸದ್ಯ ಈ ತೀರ್ಮಾನದ ಹಿನ್ನೆಲೆಯಲ್ಲಿ ಗೋಪಿಚಂದ್ ಅವರ ಆಕಾಡೆಮಿಯ ತರಬೇತಿ ಸಮಯವನ್ನು ಪ್ರತ್ಯೇಕಗೊಳಿಸಲಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗಿಲ್ಲ ಎಂದು ಗೋಪಿಚಂದ್ ಹೇಳಿದ್ದಾರೆ.

ಸದ್ಯ ಗೋಪಿಚಂದ್ ಅವರು ಎರಡು ಆಕಾಡೆಮಿಗಳನ್ನು ಹೊಂದಿದ್ದು, ಅರ್ಧ ಕಿಮೀ ಅಂತರದಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಇದ್ದ ಹಳೆಯ ತರಬೇತಿ ಕೇಂದ್ರದ ಅಲ್ಪ ದೂರದಲ್ಲೇ ಮತ್ತೊಂದು ಹೊಸ ಕೇಂದ್ರ ಸ್ಥಾಪನೆ ಕೆಲ ವರ್ಷಗಳ ಹಿಂದೆ ಆರಂಭ ಮಾಡಲಾಗಿತ್ತು.

2014 ರಲ್ಲಿ ಗೋಪಿಚಂದ್ ತರಬೇತಿ ಕೇಂದ್ರದಿಂದ ಹೊರ ನಡೆದಿದ್ದ ಸೈನಾ ಬೆಂಗಳೂರಿನಲ್ಲಿ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಕಳೆದ ಸೆಪ್ಟೆಂಬರ್ ನಲ್ಲಿ ಮತ್ತೆ ಸೈನಾ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದಿರುಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದ ನಂತರ ಗೋಪಿಚಂದ್ ಅವರ ಆಕಾಡೆಮಿಗೆ ಹಿಂದುರುಗಿ ಪಿವಿ ಸಿಂಧೂ ರನ್ನು ಮಣಿಸಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ತರಬೇತಿ ತಂಡದ ಈ ತೀರ್ಮಾನದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಂಧೂ ತಂದೆ, ಸದ್ಯ ನಿಗಧಿ ಮಾಡಿರುವ ಅವಧಿಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಗೋಪಿಚಂದ್ ಅವರು ಎಲ್ಲಾ ಆಟಗಾರರಿಗೂ ಒಂದೇ ಸಮಯವನ್ನು ನೀಡುತ್ತಿದ್ದಾರೆ. ಇದಕ್ಕಿಂತ ಹೆಚ್ಚಿನದಾಗಿ ಏನನ್ನು ಕೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯೇಕ ತರಬೇತಿ ಯಾಕೆ?

ಕಳೆದ ಕಾಮನ್​​ವೆಲ್ತ್​ ಗೇಮ್ಸ್​​ನಲ್ಲಿ ಸೈನಾ ನೆಹ್ವಾಲ್​​ ವಿರುದ್ಧ ಸಿಂಧು ಪರಾಭವಗೊಂಡು ಬೆಳ್ಳಿಯ ಪದಕಕ್ಕೆ ಸೀಮಿತರಾಗಿದ್ದರು. ಇನ್ನೂ, ಇವರಿಬ್ಬರ ನಡುವೆ ನಂಬರ್​ ಒನ್​ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಲೇ ಇರುವುದು ಎಲ್ಲರಿಗೂ ಗೊತ್ತೆ ಇದೆ. ಇದರ ನಡುವೆ ಪರಸ್ಪರ ಒಟ್ಟೊಟ್ಟಿಗೆ ತರಭೇತಿ ಪಡೆದರೆ, ಇಬ್ಬರ ವೈಫಲ್ಯ ಹಾಗೂ ತಂತ್ರಗಾರಿಕೆಗಳು ಪರಸ್ಪರ ಗೊತ್ತಾಗುವುದರಿಂದ ಅದು ಪಂದ್ಯಗಳಲ್ಲಿ ಪ್ರತಿಕೂಲ ಪರಿಣಾಮಕ್ಕೆ ಕಾರಣವಾಗಬಹುದು ಎನ್ನುವ ಕಾರಣಕ್ಕೆ ಸಿಂಧು ಕೋಚ್​​ ಗೋಪಿಚಂದ್​ರಿಗೆ ಸೇರಿದ ಹಳೇಯ ಅಕಾಡೆಮಿಯಲ್ಲಿ ಪ್ರಾಕ್ಟೀಸ್​ ನಡೆಯುತ್ತಿದ್ದಾರೆ ಅಂತಾ ತಂದೆ ಪಿ.ವಿ. ರಾಮಣ್ಣ ತಿಳಿಸಿದ್ದಾರೆ.

ಇದಕ್ಕೆ ಕೋಚ್​ ಕೂಡ ಸಮ್ಮತಿಸಿದ್ದು, ಸೈನಾ ಹಾಗೂ ಸಿಂಧುಗೆ ಪ್ರತ್ಯೇಕ ಅವಧಿಯಲ್ಲಿ ತರಭೇತಿ ನೀಡುತ್ತಿದ್ದಾರಂತೆ. ಒಟ್ಟಾರೆ, ತಾರಾಜೋಡಿ ನಡುವಿನ ಈ ಸ್ಪರ್ಧೆ ಕ್ರೀಡೆಗಷ್ಟೆ ಸೀಮಿತವಾಗಿರಲಿ ಎನ್ನುವುದು ಕ್ರೀಡಾಭಿಮಾನಿಗಳ ಬಯಕೆಯಾಗಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..