ರೋಹಿತ್ – ಧವನ್ ಗೆ A + ಗ್ರೇಡ್, ಟೆಸ್ಟ್ ಸ್ಪೆಷಲಿಸ್ಟ್ಸ್ ಗಳಿಗೆ A ಗ್ರೇಡ್..!! BCCI ವಿರುದ್ಧ ವಾಸಿಮ್ ಅಕ್ರಮ್ ಕಿಡಿ..!!

pak-bowler-wasim-akram-condemns-bcci-for-offering-less-contract-for-test-specialists -kannadanaadi news

ಮೊನ್ನೆ ಮೊನ್ನೆ ತಾನೆ ಬಿಸಿಸಿಐ ಟೀಮ್​​ ಇಂಡಿಯಾ ಆಟಗಾರರ ಹೊಸ ಹೊಸ ಒಪ್ಪಂದವನ್ನು ಬಿಡುಗಡೆ ಮಾಡಿತ್ತು. ಈ ಒಪ್ಪಂದದ ಪ್ರಕಾರ ಆಟಗಾರರಿಗೆ A+. A .B. C ಎಂದು ಗ್ರೇಡ್​ ನೀಡಲಾಗಿದ್ದು, ಇದರ ಪ್ರಕಾರ ಒಪ್ಪಂದದ ಮೊತ್ತವನ್ನು ಘೋಷಿಸಲಾಗಿದೆ. ಇಲ್ಲಿ ವೈಟ್​ ಬಾಲ್​ ಸ್ಪೆಷಲಿಸ್ಟ್‌ಗಳಿಗಿಂತ ರೆಡ್ ಬಾಲ್ ಸ್ಪೆಷಲಿಸ್ಟ್‌ಗಳಿಗೆ ಕಮ್ಮಿ ಮೊತ್ತ ನೀಡಲಾಗಿದೆ. ಬಿಸಿಸಿಐನ ಈ ನಡೆಯನ್ನು ಪಾಕ್​ ಮಾಜಿ ವೇಗದ ಬೌಲರ್ ವಾಸಿಂ ಅಕ್ರಂ ವಿರೋಧಿಸಿದ್ದಾರೆ.

ರೋಹಿತ್-ಧವನ್​ಗ್ಯಾಕೆ ಅಷ್ಟು..?

ವೈಟ್​ ಬಾಲ್ ಸ್ಪೆಷಲಿಸ್ಟ್ ಅಂತಾನೇ ಕರೆಸಿಕೊಳ್ಳುವ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಸೇರಿದಂತೆ ಬೂಮ್ರಾರಂತ ಏಕದಿನ ಹಾಗೂ ಟಿ-20 ಆಟಗಾರರಿಗೆ A+ ಗ್ರೇಡ್​ ನೀಡಿರುವ ಬಿಸಿಸಿಐ, ಒಪ್ಪಂದದಲ್ಲಿ ಭರ್ಜರಿ ಮೊತ್ತವನ್ನು ನೀಡಿದೆ.

pak-bowler-wasim-akram-condemns-bcci-for-offering-less-contract-for-test-specialists -kannadanaadi news -3

ಆದ್ರೆ ರೆಡ್ ಬಾಲ್ ಸ್ಪೆಷಲಿಸ್ಟ್​ಗಳಾದ ಚೆತೇಶ್ವರ ಪೂಜಾರ ಸೇರಿದಂತೆ, ಅಶ್ವಿನ್ ಜಡೇಜಾ ಅವರಂತ ಟೆಸ್ಟ್ ಆಟಗಾರರಿಗೆ A ಗ್ರೇಡ್ ನೀಡಿರುವ ಬಿಸಿಸಿಐ A+ ಗ್ರೇಡ್​ಗಿಂತ ಕಡಿಮೆ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ. ಬಿಸಿಸಿಐನ ಈ ನಡೆಯನ್ನು ಪ್ರಶ್ನಿಸಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಆಕ್ರಂ, ಏಕದಿನ ಕ್ರಿಕೆಟ್​ ಆಟಗಾರರಿಗೆ ಇಷ್ಟು ಮೊತ್ತ ನೀಡುವ ಅವಶ್ಯಕತೆ ಇದೆಯಾ ಎಂದಿದ್ದಾರೆ. ಅಷ್ಟಕ್ಕೂ ಟೆಸ್ಟ್ ಆಟಗಾರರು ಯಾವುದರಲ್ಲಿ ಕಮ್ಮಿ ಎಂದು ಪ್ರಶ್ನಿಸಿದ್ದಾರೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍