ಬಟ್ಲರ್ ಏಕಾಂಗಿ ಹೋರಾಟದ ನಡುವೆಯೂ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್..! ಚೆನ್ನೈ ಸೂಪರ್ ಕಿಂಗ್ಸ್​​​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ 4 ವಿಕೆಟ್‌ಗಳ ಗೆಲುವು..!!

ಜೈಪುರದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್​​​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್ 4 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಆರಂಭಿಕ ಬ್ಯಾಟ್ಸ್​ಮ್ ಈ ಮೂಲಕ ರಾಯಲ್ಸ್​​ ತನ್ನ ಪ್ಲೇ ಆಫ್ ಕನಸನ್ನು ಇನ್ನು ಜೀವಂತವಾಗಿಟ್ಟುಕೊಂಡಿದೆ.

ಟಾಸ್​​ ಗೆದ್ದು ಪಂದ್ಯ ಸೋತ ಧೋನಿ ಪಡೆ
ಟಾಸ್ ಗೆದ್ದು ಬ್ಯಾಟಿಂಗ್ ಆರಂಬಿಸಿದ ಸಿಎಸ್‌ಕೆ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 176 ರನ್‌ ಗಳಿಸಿತು. ದೊಡ್ಡ ಮೊತ್ತ ಕಲೆ ಹಾಕುವ ಯೋಚನೆಯಲ್ಲಿ ಬ್ಯಾಟಿಂಗ್ ಆರಂಭಿಸಿದ ಧೋನಿ ಪಡೆಗೆ, ರಾಯಲ್ಸ್‌ ತಂಡದ ಯಾರ್ಕರ್‌ ಸ್ಪೆಷಲಿಸ್ಟ್​​​ ಜೋಫ್ರಾ ಆರ್ಚರ್ ಆಘಾತ ನೀಡಿದರು. ಇನಿಂಗ್ಸ್​​ನ 3 ನೇ ಓವರ್‌ನಲ್ಲಿ ತಂಡದ ಮೊತ್ತ 19 ಆಗಿದ್ದಾಗ, ಆರಂಭಿಕ ಆಟಗಾರ ಅಂಬಟಿ ರಾಯುಡು ವಿಕೆಟ್​ ಪಡೆಯುವ ಮೂಲಕ ಪೆವಿಲಿಯನ್ ದಾರಿ ತೋರಿಸಿದ್ರು.

ನಂತರ​ ಶೇನ್ ವಾಟ್ಸನ್​ಗೆ ಜೊತೆಯಾದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಜವಾಬ್ದಾರಿಯುತ ಆಟವಾಡಿದರು. ಎರಡನೇ ವಿಕೆಟ್​ಗೆ ಈ ಜೋಡಿ 86 ರನ್‌ ಸೇರಿಸಿದ್ದು, ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿತು. ಪರಿಣಾಮವಾಗಿ ಚೆನ್ನೈ ಸೂಪರ್​ ಕಿಂಗ್ಸ್​​​ ಸ್ಕೋರ್​​​ 11ನೇ ಓವರ್‌ನಲ್ಲಿ 100 ರ ಗಡಿ ಮುಟ್ಟಿತು. ಅಂತಿಮವಾಗಿ 20 ಓವರ್​​ಗಳಲ್ಲಿ 4 ವಿಕೆಟ್​ ಕಳೆದುಕೊಂಡ ಸಿಎಸ್​ಕೆ, ರೈನಾ ಸಿಡಿಸಿದ ಅರ್ಧಶತಕದ ನೆರವಿನಿಂದ ಅಂತಿಮವಾಗಿ 176 ರನ್ ಕಲೆ ಹಾಕುವ ಮೂಲಕ, ಹೋರಾಟದ ಮೊತ್ತ ಗಳಿಸಿತು.

ರಾಯಲ್ಸ್​​ಗೆ ಆರಂಭಿಕ ಆಘಾತ

ಚೆನ್ನೈ ನೀಡಿದ್ದ 177 ರನ್ ಟಾರ್ಗೆಟ್​ ಬೆನ್ನತ್ತಿದ ರಾಯಲ್ಸ್​​ ಆರಂಭದಲ್ಲೇ ಆಘಾತಕ್ಕೋಳಗಾಯಿತು. ಬಟ್ಲರ್​​ ಜೊತೆ ಇಂನಿಂಗ್ಸ್​ ಆರಂಭಿಸಿ ಬೆನ್​ ಸ್ಟೋಕ್ಸ್,​​​​ ತಂಡದ ಮೊತ್ತ 48 ಆಗಿದ್ದಾಗ 11 ರನ್ ಗಳಿಸಿ ಹರ್ಭಜನ್ ಸಿಂಗ್​ ಬೌಲಿಂಗ್​ನಲ್ಲಿ ಬೌಲ್ಡ್​​ ಆದ್ರು. ನಂತರ ಬಂದ ಕ್ಯಾಪ್ಟನ್​ ಅಜಿಂಕ್ಯಾ ರಹಾನೆ ಕೂಡ 4 ರನ್ ಗಳಿಸಿ ಪೆವಿಲಿಯನ್ ಸೇರುವ ಮೂಲಕ 53 ರನ್​ಗಳಿಗೆ ರಾಯಲ್ಸ್​​ 2 ವಿಕೆಟ್​ ಕಳೆದುಕೊಂಡಿತ್ತು.

ಬಟ್ಲರ್​​ ಏಕಾಂಗಿ ಹೋರಾಟ

ಒಂದು ಕಡೆ ಬ್ಯಾಕ್​ ಟು ಬ್ಯಾಕ್​ ವಿಕೆಟ್​ಗಳು ಕಳೆದುಕೊಳ್ಳುತ್ತಿದ್ರು ತಲೆ ಕೆಡಿಸಿಕೊಳ್ಳದ ಜೋಸ್ ಬಟ್ಲರ್, ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. 60 ಎಸೆತಗಳಲ್ಲಿ ಅಜೇಯ 95 ರನ್ ಗಳಿಸಿದ ಬಟ್ಲರ್,​​ ತಂಡಕ್ಕೆ ಗೆಲುವು ತಂದುಕೊಟ್ರು. ಅಂತಿಮವಾಗಿ 6 ವಿಕೆಟ್​ ಕಳೆದುಕೊಂಡ ರಹಾನೆ ಪಡೆ,​​​​ ಇನ್ನು ಒಂದು ಎಸೆತ ಬಾಕಿ ಇರುವಂತೆ 177 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ಗೆಲುವು ದಾಖಲಿಸಿತು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍