ಬ್ಯಾಟ್ಸ್ ಮನ್ ಗಳು ಅಬ್ಬರಿಸಿ ಬೊಬ್ಬಿರಿದ ಪಂದ್ಯದಲ್ಲಿ ಆರ್ ಸಿ ಬಿ ಗೆ ಹೈದರಾಬಾದ್ ವಿರುದ್ದರೋಚಕ ಜಯ..! ಗೆಲ್ಲಲು ೨೧೯ ರನ್ ಟಾರ್ಗೆಟ್ ಇದ್ರೂ, ಕೊನೆಯ ಓವರ್​ನಲ್ಲಿ ಬೇಕಿತ್ತು ಜಸ್ಟ್ 20 ರನ್​ : ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಕೊನೆಯ ಓವರ್ ರೋಚಕತೆ ಪಡೆದ ಪಂದ್ಯದಲ್ಲಿ ಆರ್​ಸಿಬಿ ಗೆಲುವು ಪಡೆದು, ಪ್ಲೇ ಆಫ್​ ಕನಸನ್ನ ಇನ್ನೂ ಜೀವಂತವಾಗಿರಿಸಿಕೊಂಡಿದೆ. ಎಸ್​ಆರ್​ಹೆಚ್ ಕ್ಯಾಪ್ಟನ್​ ಅಮೋಘ ಆಟದ ಹೊರತಾಗಿಯೂ ಡೆತ್ ಓವರ್ಸ್​ನಲ್ಲಿ ವಿಫಲರಾಗಿ ಪಂದ್ಯವನ್ನ ಕೈಚೆಲ್ಲಿದ್ದರು. ಪರಿಣಾಮ, ಆರ್​ಸಿಬಿ .. ರನ್​ಗಳ ಗೆಲುವು ಸಾಧಿಸಿದರು.

ಆರ್​​ಸಿಬಿ ನೀಡಿದ 219 ರನ್​ಗಳ ಬಾರಿ ಸ್ಕೋರ್​ ಬೆನ್ನಟ್ಟಿದ ಸನ್​ರೈಸರ್ಸ್​, ಆರಂಭದಿಂದಲೇ ವೇಗದ ಬ್ಯಾಟಿಂಗ್​​ಗೆ ಇಳಿದರು. ಅಲೆಕ್ಸ್​ ಹೇಲ್ಸ್​ ಅಬ್ಬರಿಸೋಕೆ ಆರಂಭಿಸಿದರೆ, ಶಿಖರ್​ ಧವನ್​​ ಅವರಿಗೆ ಬೇಕಾದ ಸಾಥ್​ ನೀಡಿದರು. 24 ಎಸೆತಗಳಲ್ಲಿ 37 ರನ್​​ ಗಳಿಸಿದ ಹೇಲ್ಸ್, ಮೊಯಿನ್​ ಅಲಿ ಎಸೆತದಲ್ಲಿ ಎಬಿಡಿ ಹಿಡಿದ ಅದ್ಭುತ್​ ಕ್ಯಾಚ್​ನಿಂದಾಗಿ ಔಟಾದರು. ಇನ್ನೋರ್ವ ಆರಂಭಿಕ ಶಿಖರ್​ ಧವನ್​ ಚಹಲ್​​ ಎಸೆತದಲ್ಲಿ ಅವರಿಗೇ ಕ್ಯಾಚ್​ ನೀಡಿ ಔಟಾದರು.

ಆರ್​ಸಿಬಿ ಬೌಲರ್​​ಗಳಿಗೆ ಯಮರೂಪಿಯಾದ ಕ್ಯಾಪ್ಟನ್​​ ವಿಲಿಯಮ್ಸನ್​


ಇನ್ನು, ಈ ಸರಣಿಯುದ್ದಕ್ಕೂ ಮಿಂಚಿರೋ ಎಸ್​ಆರ್​ಹೆಚ್​ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​ ಇಂದಿನ ಪಂದ್ಯದಲ್ಲೂ ಸ್ಪೋಟಕ ಬ್ಯಾಟಿಂಗ್ ತೋರ್ಪಡಿಸಿದರು. ವಿಕೆಟ್​ನ್ನೂ ನೀಡದೆ, ರನ್​ ವೇಗ ಹೆಚ್ಚಿನ ವಿಲಿಯಮ್ಸನ್​, ಆರ್​ಸಿಬಿಯಿಂದ ಗೆಲುವು ಕಸಿದುಕೊಳ್ಳುವ ಸೂಚನೆ ಮೂಡಿಸಿದರು. ನಾಯಕನ ಜೊತೆಗೂಡಿದ ಮನಿಷ್​​ ಪಾಂಡೆ ಕೂಡ ಈ ಬಾರಿ ಉತ್ತಮ ಪ್ರದರ್ಶನ ನೀಡಿದರು.

ಕೊನೆಯ ಓವರ್​ನಲ್ಲಿ ಬೇಕಿತ್ತು 20 ರನ್​

ಹಲವು ಪಂದ್ಯಗಳಂತೆ ಆರ್​ಸಿಬಿ ಪಂದ್ಯ ಮತ್ತೆ ಕೊನೆಯ ಓವರ್​​ ರೋಚಕತೆ ಪಡೆಯಿತು. ಕೊನೆಯ 1 ಓವರ್​ನಲ್ಲಿ ಎಸ್​ಆರ್​​ಹೆಚ್​ಗೆ ಗೆಲ್ಲಲು 20 ರನ್​ ಬೇಕಿದ್ದಾಗ ಮೊಹಮ್ಮದ್ ಸಿರಾಜ್​ ಬೌಲಿಂಗ್​ಗಿಳಿದರು. ಮೊದಲ ಎಸೆತದಲ್ಲೇ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​ ವಿಕೆಟ್​ ಪಡೆದರು. ಎರಡನೇ ಎಸೆತದಲ್ಲಿ ಮನಿಷ್​ ಪಾಂಡೆ ಬೀಟ್ ಮಾಡಿದರು.

ಮಿಂಚಿದ ಆರ್​​ಸಿಬಿ ಬ್ಯಾಟ್ಸ್​​ಮನ್ಸ್​


ಟಾಸ್​ ಗೆದ್ದ ಸನ್​ರೈಸರ್ಸ್​ ಹೈದ್ರಾಬಾದ್​ ಕ್ಯಾಪ್ಟನ್​ ಫೀಲ್ಡಿಂಗ್ ಆರಿಸಿಕೊಂಡರು. ಕಳೆದ ಬಾರಿಯಂತೆ ಈ ಬಾರಿಯೂ ಪಾರ್ಥಿವ್​ ಪಟೇಲ್​ ಜೊತೆಗೆ ಓಪನರ್​ ಆಗಿ ಕಣಕ್ಕಿಳಿದ ವಿರಾಟ್​ ಕೊಹ್ಲಿ ಉತ್ತಮ ಆರಂಭ ಒದಗಿಸಲು ಯತ್ನಿಸಿದರು. ಆದರೆ, 12 ರನ್​​ ಗಳಿಸಿದ್ದಾಗ ರಶೀದ್ ಖಾನ್​ ಗೂಗ್ಲಿಗೆ ಬೋಲ್ಡ್​​ ಆದರು. ಇದಕ್ಕೂ ಮುಂಚೆಯೇ ಸಂದೀಪ್​ ಶರ್ಮಾ ಎಸೆತದಲ್ಲಿ ಪಾರ್ಥಿವ್ ಪಟೇಲ್​ ಔಟಾದರು.

ಮೊಯಿನ್​-ಡಿವಿಲಿಯರ್ಸ್​ ಆರ್ಭಟ

3ನೇ ವಿಕೆಟ್​ಗೆ ಜತೆಯಾದ ಎಬಿ ಡಿವಿಲಿಯರ್ಸ್ ಹಾಗೂ ಮೊಯಿನ್​ ಅಲಿ ಜೋಡಿ, ಎಸ್​​ಆರ್​ಹೆಚ್​ ಬೌಲರ್​ಗಳಿಗೆ ತಕ್ಕ ಉತ್ತರ ನೀಡಿತು. ಎಬಿಡಿ ಒಂದೆಡೆ ಬೌಂಡರಿ ಮೇಲೆ ಬೌಂಡರಿ ಬಾರಿಸಿದರೆ, ಮೊಯಿನ್​ ಅಲಿ ಭರ್ಜರಿ ಸಿಕ್ಸರ್​ಗಳನ್ನ ಬಾರಿಸಿದರು. 39 ಎಸೆತಗಳನ್ನ ಎದುರಿಸಿದ ಎಬಿ, 12 ಬೌಂಡರಿ ಹಾಗೂ 1 ಸಿಕ್ಸರ್​ ಮೂಲಕ 69 ರನ್​ ಗಳಿಸಿದರು. ಇನ್ನು, ಇವರೊಟ್ಟಿಗೆ ಉತ್ತಮ ಜತೆಯಾಟವಾಡಿದ ಮೊಯಿನ್​ ಅಲಿ, 34 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ 2 ಬೌಂಡರಿಗಳ ಮೂಲಕ 65 ರನ್​​ ಗಳಿಸಿದರು. 107 ರನ್​​ಗಳ ಜತೆಯಾಟ ನೀಡಿದ ಈ ಜೋಡಿಯನ್ನ 15ನೇ ಓವರ್​ನಲ್ಲಿ ರಶೀದ್​ ಖಾನ್​​ ವಿಕೆಟ್​ ಪಡೆದರು.

ಗ್ರ್ಯಾಂಡ್​ಹೊಮ್​, ಸರ್ಫ್​ರಾಜ್​ ಅಬ್ಬರದ ಆಟ
ಎಬಿಡಿ-ಮೊಯಿನ್​ ವಿಕೆಟ್​ ಪತನದ ನಂತರ ಇನ್ನೇನು ಸ್ವಲ್ಪ ರಿಲ್ಯಾಕ್ಸ್​ ಆಗಬೇಕೆಂದರೆ, ಎಸ್​​ಆರ್​ಹೆಚ್​ ಬೌಲರ್​ಗಳ ಬೆವರಿಳಿದ ಕಾಲಿನ್​ ಗ್ರ್ಯಾಂಡ್​ಹೊಮ್​ ಆರ್​ಸಿಬಿ ಒಟ್ಟು ಮೊತ್ತ 200 ರನ್​ ದಾಟಲು ನೆರವಾದರು. ಗ್ರ್ಯಾಂಡ್​ಹೊಮ್​ 40 ರನ್​ ಗಳಿಸಿ ಔಟಾದರೆ, ಸರ್ಫರಾಜ್​ ಖಾನ್​ 22 ರನ್​ ಗಳಿಸಿ ಅಜೇಯರಾಗುಳಿದರು. 20 ಓವರ್​​ ಅಂತ್ಯಕ್ಕೆ 6 ವಿಕೆಟ್​ ಕಳೆದುಕೊಂಡ ಆರ್​ಸಿಬಿ 218 ರನ್​ಗಳ ಒಟ್ಟು ಮೊತ್ತ ದಾಖಲಿಸಿದರು.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍