ಕ್ರಿಕೆಟ್​ ಲೋಕದ ಈ ಫೀಮೆಲ್ ಧೋನಿ, ಯಾರು ಗೊತ್ತಾ..? ‘ಲೇಡಿ ಧೋನಿ’ ಅಂತ ಯಾಕೆ ಕರೀತಾರೆ..?

ಇಂಗ್ಲೆಂಡ್​​ ಮಹಿಳಾ ಕ್ರಿಕೆಟ್​ ತಂಡದ ವಿಕೆಟ್​ ಕೀಪರ್​​​ ಸಾರಾ ಟೈಲರ್ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್​ ಸುದ್ದಿಯಾಗ್ತಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಸಾರಾ ಪರ್ಫಾರ್ಮನ್ಸ್ ನೋಡಿದ ಫ್ಯಾನ್ಸ್​​, ಈಕೆ ಕ್ರಿಕೆಟ್​ ಲೋಕದ ಫಿಮೆಲ್ ಧೋನಿ ಅಂತ ಕಾಮೆಂಟ್ ಮಾಡ್ತಿದ್ದಾರೆ.

ಸಾರಾಗೆ ಯಾಕೆ ಸಿಕ್ತು ಲೇಡಿ ಧೋನಿ ಟೈಟಲ್..?
ವಿಕೆಟ್​ ಹಿಂದೆ ಮಹೇಂದ್ರ ಸಿಂಗ್​ ಧೋನಿ ಪರ್ಫಾರ್ಮನ್ಸ್ ವಿಶ್ವಕ್ಕೆ ಗೊತ್ತಿದೆ. ವಿಕೆಟ್​ ಹಿಂದೆ ಜಿಂಕೆಯಂತೆ ಚುರುಕಾಗಿ ಮುಮೆಂಟ್​ ಮಾಡುವ ಮಾಹಿ, ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಬ್ಯಾಟ್ಸ್​​ಮನ್​ಗಳನ್ನ ಸ್ಟಂಪ್​ ಔಟ್​ ಮಾಡ್ತಾರೆ.

ಸದ್ಯ ಮಾಹಿಯಂತೆ ಚುರುಕಾಗಿ ವಿಕೆಟ್​ ಕದಿಯೋ ಸಾರಾ, ಈಗ ಫೀಮೆಲ್​ ಧೋನಿ ಅಂತಾನೇ ಪೇಮಸ್​ ಆಗ್ಬಿಟ್ಟಿದ್ದಾರೆ. ಶನಿವಾರ ನಡೆದ ಐಸಿಸಿ ಏಕದಿನ ಚಾಂಪಿಯನ್​​ ಶಿಪ್​ ಟೂರ್ನಿಯ ಪಂದ್ಯದಲ್ಲಿ ಸೌತ್​ ಆಫ್ರಿಕಾ ತಂಡದ ವಿರುದ್ಧ ಇಂಗ್ಲೆಂಡ್​​ 190 ರನ್ ಟಾರ್ಗೆಟ್ ನೀಡಿದ್ರು.

ಇಂಗ್ಲೆಂಡ್​ ನೀಡಿದ್ದ ಟಾರ್ಗೆಟ್​ ಬೆನ್ನತ್ತಿದ್ದ ಆಫ್ರಿಕಾ ಮಹಿಳೆಯರು 4 ರನ್ ಗಳಿಸುವಷ್ಟರಲ್ಲಿ 1 ವಿಕೆಟ್ ಕಳೆದುಕೊಂಡಿದ್ರು. ಅನ್ಯಾ ಶ್ರಬ್ಬಾಲ್ ಎಸೆದ ಇನಿಂಗ್ಸ್​​ನ 4 ನೇ ಓವರ್​ನ ಮೊದಲ ಎಸೆತವನ್ನು ಕಟ್ ಮಾಡುವ ತವಕದಲ್ಲಿದ್ದ ಆಫ್ರಿಕಾ ಬ್ಯಾಟ್ಸ್​​ವುಮೆನ್​​ ಸುನ್​ ಲೂಯನ್ಸ್​​​ರನ್ನ ವಂಚಿಸಿದ ಚೆಂಡು ನೇರವಾಗಿ ವಿಕೆಟ್​ ಕೀಪರ್​​ ಸಾರಾ ಕೈ ಸೇರಿತ್ತು. ಆ ಕೂಡಲೇ ತಕ್ಷಣ ಸಾರಾ ಮಿಂಚಿನ ವೇಗದಲ್ಲಿ ಬೆಲ್ಸ್​​ ಹಾರಿಸಿ ಲೂಯನ್ಸ್​ರನ್ನು ಸ್ಟಂಪ್ ಔಟ್​ ಮಾಡಿದ್ರು.  ಸಾರಾ ಶರವೇಗದ ವಿಕೆಟ್ ಕೀಪಿಂಗ್​​​​​ಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬುತ್ತಿವೆ. ಇನ್ನು ಕೆ ಫ್ಯಾನ್ಸ್​​​​​​​​​​​ಸಾರಾ ವಿಕೆಟ್ ಕೀಪಿಂಗ್ ವಿಡಿಯೋವನ್ನ ಪೋಸ್ಟ್ ಮಾಡಿ ಲೇಡಿ ಧೋನಿ ಅಂತ ಕಾಮೆಂಟ್​ ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..