ದುಬೈನಲ್ಲಿಪಾಕ್ ಯುವತಿ ಜೊತೆ ಚಕ್ಕಂದ, ಅವಳ ಜೊತೆಗೇನೇ ಮ್ಯಾಚ್ ಫಿಕ್ಸಿಂಗ್..!! BCCI ಗೆ ಶಮೀ ಪತ್ನಿಯ ಕಂಪ್ಲೇಂಟ್..

shami's-wife-complains-to-bcci-against-shami-on-match-fixing-with-pak-woman - kannadanaadi news

ಬಿರುಗಾಳಿಯಂತ ಎಸೆತಗಳನ್ನು ಎಸೆಯುತ್ತಿದ್ದ ವೇಗದ ಬೌಲರ್ ಮೊಹಮ್ಮದ್ ಶಮಿ ಸಂಸಾರದಲ್ಲಿ, ಈಗ ಬಿರುಗಾಳಿ ಎದ್ದಿದೆ. ಗಂಡ ಹೆಂಡತಿ ಇಬ್ಬರು, ಒಬ್ಬರ ಮೇಲೆ ಒಬ್ಬರಂತೆ ಮಾಧ್ಯಮಗಳ ಎದುರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.

 ಕದ್ದು ಮುಚ್ಚಿಮೊಬೈಲ್ನಲ್ಲಿ ಚಾಟಿಂಗ್..!

ಎರೆಡೆರಡು ಅಫೇರ್ ಹೊಂದಿರುವ ಶಮಿ, ಅನೇಕ ಯುವತಿಯರ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ. ಶಮಿಗಾಗಿ ನಾನು ಮಾಡೆಲಿಂಗ್​ ಕರಿಯರ್​​ ಬಿಟ್ಟು ಬಂದ್ರೆ, ಶಮಿ ಮಾತ್ರ ನನ್ನನ್ನ ಮದುವೆಯಾಗಿದ್ದೇ ದೊಡ್ಡ ತಪ್ಪು ಅನ್ನೋ ತರ, ಬಿಹೇವ್​ ಮಾಡ್ತಿದ್ದಾರೆ. ಮದುವೆಗೂ ಮೊದಲೇ ಅತ್ತೆ ಮಗಳೊಂದಿಗೆ ಲವ್ ಅಫೇರ್ ಇಟ್ಟುಕೊಂಡಿದ್ದ ಶಮಿ, ಅವಳಿಗಾಗಿ ಸುಸೈಡ್ ಮಾಡಿಕೊಳ್ಳಲು ಮುಂದಾಗಿದ್ರು. ಅಷ್ಟೇ ಅಲ್ಲದೇ ಶಮಿಗೆ ಕೊಹ್ಲಿಯಂತೆ ಬಾಲಿವುಡ್​ ನಟಿಯನ್ನ ಮದುವೆಯಾಗುವ ಮನಸ್ಸಿತ್ತು ಎಂದಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಮ್ಯಾಚ್ ಫಿಕ್ಸಿಂಗ್ನಲ್ಲಿ ಶಮಿ ಭಾಗಿ..!

ಮೊಹಮ್ಮದ್ ಶಮಿ ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಹಸೀನ್ ಜಹಾನ್​, ಪದೇ ಪದೇ ದುಬೈಗೆ ತೆರಳುವ ಶಮಿ ಅಲ್ಲಿ ಅಲಿಷ್ಬಾ ಎಂಬ ಪಾಕ್ ಮೂಲದ ಯುವತಿಯನ್ನು ಬೇಟಿಯಾಗಿ ಅವರಿಂದ ದುಡ್ಡು ಪಡೆಯುತ್ತಿದ್ದರಂತೆ. ಒಂದೇ ರೂಮ್​ನಲ್ಲಿ ಉಳಿದುಕೊಳ್ಳುತ್ತಿದ್ದ ಇವರಿಬ್ಬರು, ಸಂಸಾರದಲ್ಲಿ ನನಗೆ ಮೋಸ ಮಾಡಿದ್ದಲ್ಲದೇ, ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿ ಆಗುವ ಮೂಲಕ ದೇಶಕ್ಕೂ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ತನ್ನ ಗಂಡ ಹಲವು ಪರಸ್ತ್ರೀಯರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಆರೋಪ ಮಾಡಿದ್ದ ಹಸಿನಾ ಫೇಸ್​ಬುಕ್ ಅಕೌಂಟ್​ ಈಗ ಸದ್ದಿಲ್ಲದೆ ಬ್ಲಾಕ್ ಆಗಿದೆ.

ಗಂಡನ ಕರ್ಮಕಾಂಡವನ್ನೆಲ್ಲ ಫೇಸ್​ಬುಕ್ ಮೂಲಕ ಬಿಚ್ಚಿಟ್ಟಿದ್ದ ಹಸಿನಾ ಜಹಾನ್

ತನ್ನ ಗಂಡನ ಕರ್ಮಕಾಂಡವನ್ನೆಲ್ಲ ಫೇಸ್​ಬುಕ್ ಮೂಲಕ ಬಿಚ್ಚಿಟ್ಟಿದ್ದ ಹಸಿನಾ ಜಹಾನ್ ಅವರ ಸೋಶಿಯಲ್ ಅಕೌಂಟ್​​ನ್ನು ಫೇಸ್​ಬುಕ್​ ಸದ್ದಿಲ್ಲದೇ ಬ್ಲಾಕ್ ಮಾಡಿದೆ. ನನ್ನ ಒಪ್ಪಿಗೆ ಪಡೆಯದೆ ನಾನು ಮಾಡಿದ್ದ ಪೋಸ್ಟ್​ಗಳನ್ನು ಅಕೌಂಟ್​ನಿಂದ ತೆಗೆದು ಹಾಕಿದ್ದು, ನನ್ನ ಆಕೌಂಟ್ ಬ್ಲಾಕ್ ಮಾಡಲಾಗಿದೆ ಎಂದು ಶಮಿ ಅವರ ಪತ್ನಿ ದೂರಿದ್ದಾರೆ.

ಸೋಶಿಯಲ್ ಮಿಡಿಯಾದಲ್ಲಿ ಸಕ್ರಿಯರಾಗಿದ್ದ ಹಸಿನಾ ಜಹಾನ್, ಶಮಿ ಬೇರೆ ಹುಡುಗಿಯರ ಜೊತೆಗೆ ಇರುವ ಫೋಟೋಗಳನ್ನ ತನ್ನ ಅಕೌಂಟ್​​ ನಲ್ಲಿ ಪೋಸ್ಟ್​ ಮಾಡಿ  ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಆರೋಪ ಮಾಡಿದ್ರು. ಅಷ್ಟೇ ಅಲ್ಲದೇ ಮೊಹಮ್ಮದ್ ಶಮಿ ತನ್ನ ಗರ್ಲ್​ ಫ್ರೇಂಡ್ಸ್​ಗಳ ಜೊತೆ ಚಾಟ್​ ಮಾಡಿದ್ದ ಮೇಸೆಜ್​ಗಳ ಸ್ಕ್ರೀನ್ ಶಾಟ್ ತೆಗೆದು ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ರು. ಇದರಿಂದ ಫೇಸ್​ಬುಕ್ ಹಸಿನಾ ಜಹಾನ್​ ಅವರ ಅಕೌಂಟ್​​ನ್ನು ಬ್ಲಾಕ್ ಮಾಡಿದೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಚಿತ್ರಹಿಂಸೆ ನೀಡುತ್ತಿದ್ದ ಶಮಿ..!

ಕಳೆದ ಎರಡು ವರ್ಷಗಳಿಂದ ಮೊಹಮ್ಮದ್​ ಶಮಿ ಹಾಗೂ ಕುಟುಂಬಸ್ಥರು ನನಗೆ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅವರ ಸಹೋದರ ಹಾಗೂ ತಾಯಿ ಸೇರಿಕೊಂಡು ನನ್ನ ಹತ್ಯೆ ಮಾಡಲು ಮುಂದಾಗಿದ್ರು ಎಂದು ದೂರಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿಯ ಕ್ರಿಕೆಟ್ ಬದುಕು ಬಿರುಗಾಳಿಗೆ ಸಿಕ್ಕ ದೀಪದಂತಾಗಿದೆ. ಪೋಲಿಸ್ ಠಾಣೆಯಲ್ಲಿ ವರದಕ್ಷಿಣಿ ಕಿರುಕುಳ ಕೊಲೆ ಯತ್ನಸೇರಿದಂತೆ ಅತ್ಯಾಚಾರದ ಆರೋಪವನ್ನೂ ದಾಖಲಿಸಿರುವ ಹಸಿನಾ ಜಹಾನ್ ಈಗ ಗಂಡನ ವಿರುದ್ಧ ಬಿಸಿಸಿಐ ಮೊರೆ ಹೋಗಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಅತಂತ್ರವಾಗುತ್ತಾ ಶಮಿ ಕ್ರಿಕೆಟ್ ಬದುಕು..?

ಬಂಗಾಳದ ವೇಗದ ಬೌಲರ್ ಮೊಹಮ್ಮದ್ ಶಮಿಯ ವಿರುದ್ಧ ಪತ್ನಿ ಹಸಿನಾ ಜಹಾನ್ ಗಂಭೀರ ಆರೋಪ ಮಾಡಿದ್ದರಿಂದ, ಬಿಸಿಸಿಐ ವಾರ್ಷಿಕ ಗುತ್ತಿಗೆ ಒಪ್ಪಂದದಿಂದ ಶಮಿಯ ಹೆಸರನ್ನು ಕೈಬಿಟ್ಟಿತ್ತು. ಆದರೆ ಶಮಿ ವಿರುದ್ಧ ಅವರ ಪತ್ನಿ ಜಾಮಿನು ರಹಿತ ಕೇಸ್​ ದಾಖಲಿಸಿದ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿ ಪಾಲಿಗೆ ಟೀಮ್ ಇಂಡಿಯಾ ಬಾಗಿಲು ಬಹುತೇಕ ಮುಚ್ಚಿದಂತಾಗಿದೆ.

ಶಮಿ ವಿರುದ್ಧ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಸಿನಾ ಜಹಾನ್ ಈಗ  ಪತಿಯ ವಿರುದ್ಧ ಬಿಸಿಸಿಐನಲ್ಲೂ ದೂರು ನೀಡಿದ್ದಾರೆ. ಪಾಕ್ ಯುವತಿಯ ಜೊತೆ ಸೇರಿ ಮ್ಯಾಚ್ ಫಿಕ್ಸಿಂಗ್​ನಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ಜಹಾನ್ ಶಮಿಗೆ ತಂಡದಲ್ಲಿ ಸ್ಥಾನ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

ಪತ್ನಿ ಆರೋಪಕ್ಕೆ ಶಮಿ ಉತ್ತರವೇನು..?

ಫೇಸ್​ಬುಕ್ ಮೂಲಕ ಹಸೀನ್ ಜಹಾನ್ ತನ್ನ ಮೇಲೆ ಆರೋಪ ಮಾಡಿದ್ದೇ ತಡ  ಸಾಮಾಜಿಕ ಜಾಲತಾಣ ಟ್ವೀಟರ್​ನಲ್ಲಿ ಉತ್ತರ ಬರೆದ ಶಮಿ, ಇದು ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರ. ನನ್ನ ಕ್ರಿಕೆಟ್ ಜೀವನವನ್ನು ಮುಗಿಸುವ ಹೊನ್ನಾರ ಎಂದಿದ್ದಾರೆ,

ಪತ್ನಿಗೆ ತಲೆ ಕೆಟ್ಟಿದೆ ಎಂದ ಶಮಿ..!

ಪತ್ನಿ ಹಸೀನ್ ಜಹಾನ್​ಗೆ ತಲೆ ನೆಟ್ಟಗಿಲ್ಲ, ಮಾನಸಿಕ ಸ್ಥಿಮಿತ ಕಳೆದು ಕೊಂಡಿದ್ದಾಳೆ. ದಕ್ಷಿಣ ಆಫ್ರಿಕಾದಿಂದ ಬರುವವರೆಗೂ ನೆಟ್ಟಗಿದ್ದ ಈಕೆ, ಇದ್ದಕ್ಕಿದ್ದಂತೆ ಮೆಂಟಲ್ ತರ ಆಡುತ್ತಿದ್ದಳೆ. ನನ್ನ ಮೇಲೆ ಆಕೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ.ಅವರ ವಿರುದ್ಧ ನಾನು ದೂರು ದಾಖಲಿಸುತ್ತೆನೇ ಎಂದು ಹೇಳಿದ್ದಾರೆ.

shami's-wife-complains-to-bcci-against-shami-on-match-fixing-with-pak-woman - kannadanaadi news

shami's-wife-complains-to-bcci-against-shami-on-match-fixing-with-pak-woman - kannadanaadi news

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍