ಆರ್​​ಸಿಬಿ ಸೋಲೋಕೆ ಕಾರಣರಾದ ಕರ್ನಾಟಕದ ಸ್ಪಿನ್ನರ್ಸ್​..! ಕರ್ನಾಟಕದ ಪ್ರತಿಭೆಗಳನ್ನ ಕೈಬಿಟ್ಟಿರೋದೆ ಈಗ ಮುಳುವಾಗ್ತಿದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕರ್ನಾಟಕದ ಎಷ್ಟೋ ಪ್ರತಿಭೆಗಳನ್ನ ಕೈಬಿಟ್ಟಿರೋದೆ ಈಗ ಮುಳುವಾಗ್ತಿದೆಯೇನೋ!? ಬೇರೆ ಬೇರೆ ತಂಡಗಳನ್ನ ಸೇರಿರೋ ಕರ್ನಾಟಕ ರಾಜ್ಯ ತಂಡದ ಆಟಗಾರರು ಅದ್ಭುತ ಪರ್ಫಾರ್ಮನ್ಸ್ ನೀಡುತ್ತಿರುವುದಲ್ಲದೇ, ಆರ್​ಸಿಬಿ ಸೋಲಿಗೂ ಕಾರಣರಾಗ್ತಿದ್ದಾರೆ.

ಇಂದು ನಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವರ್ಸಸ್​ ರಾಜಸ್ಥಾನ್​ ರಾಯಲ್ಸ್​ ಪಂದ್ಯದಲ್ಲಿ ನಡೆದದ್ದು ಅದೇ! ರಾಜಸ್ಥಾನ್​​ ರಾಯಲ್ಸ್​ ನೀಡಿದ 218 ರನ್​ಗಳ ಬೃಹತ್​ ಮೊತ್ತವನ್ನ ಬೆನ್ನಟ್ಟಿತ್ತು ಆರ್​ಸಿಬಿ. ಈ ವೇಳೆ ಮೊದಲ ಓವರ್​ ಬೌಲಿಂಗ್​ಗಿಳಿದ ಆರ್​ಆರ್​ ಸ್ಪಿನ್ನರ್, ಕನ್ನಡಿಗ ಕೆ. ಗೌತಮ್​ ಸ್ಪೋಟಕ ಬ್ಯಾಟ್ಸ್​ಮನ್​​ ಬ್ರೆಂಡನ್​ ಮೆಕಲಮ್​ ವಿಕೆಟ್ ಪಡೆದರು.

ಕೊಹ್ಲಿ-ಡಿವಿಲಿಯರ್ಸ್​ ವಿಕೆಟ್​ ಪಡೆದ ಶ್ರೇಯಸ್​ ಗೋಪಾಲ್​
ಒಂದು ರೀತಿಯಲ್ಲಿ, ಕನ್ನಡಿಗ ಶ್ರೇಯಸ್​​ ಗೋಪಾಲ್​ ಅವರೇ ಆರ್​​ಸಿಬಿ ಸೋಲೋಕೆ ಪ್ರಮುಖ ಕಾರಣರಾದರು. ಯಾಕಂದ್ರೆ, ವೇಗದ ಅರ್ಧಶತಕ ಸಿಡಿಸಿ, ಅಭಿಮಾನಿಗಳಲ್ಲಿ  ಗೆಲುವಿನ ನಗೆ ಮೂಡಿಸಿದ್ದ ವಿರಾಟ್ ಕೊಹ್ಲಿ ವಿಕೆಟ್​ನ್ನ ಶ್ರೇಯಸ್​ ಗೋಪಾಲ್​ ಪಡೆದರು. 11ನೇ ಓವರ್​ನಲ್ಲಿ ಕೊಹ್ಲಿ ವಿಕೆಟ್ ಹಾಗೂ 13 ಓವರ್​ನಲ್ಲಿ ದಿ ಮೋಸ್ಟ್​​ ಡೇಂಜರಸ್​ ಎಬಿ ಡಿವಿಲಿಯರ್ಸ್​ ವಿಕೆಟ್​​ಗಳನ್ನ ಪಡೆದ ಶ್ರೇಯಸ್​ ಗೋಪಾಲ್​, ರಾಜಸ್ಥಾನ್​ ರಾಯಲ್ಸ್​ ತಂಡದ ಗೆಲುವನ್ನ ಖಾತರಿ ಪಡಿಸಿದರು.

4 ಓವರ್​​ಗಳಲ್ಲಿ 2 ವಿಕೆಟ್​ ಪಡೆದ ಗೋಪಾಲ್ ಕೇವಲ 22 ರನ್​ ನೀಡಿದರು. ಇನ್ನು, ಗೌತಮ್​ ಕೂಡ ಬಿಗ್​ ಟಾರ್ಗೆಟ್​ ಚೇಸಿಂಗ್ ಪಂದ್ಯದಲ್ಲಿ 4 ಓವರ್​ಗಳಲ್ಲಿ ಓಕೆ ಅನ್ನಬಹುದಾದ 36 ರನ್ ನೀಡಿದ್ದು, ಮೆಕಲಮ್​ ವಿಕೆಟ್​​ ಪಡೆದರು.

ಇತ್ತೀಚೆಗೆ ನಡೆದ ಆರ್​​ಸಿಬಿ ಪಂದ್ಯದಲ್ಲಿ ಕಿಂಗ್ಸ್​ ಇಲವೆನ್​ ಪಂಜಾಬ್​ ತಂಡದಲ್ಲಿರೋ ಕರುಣ್​ ನಾಯರ್​ ಹಾಗೂ ಕೆ.ಎಲ್​. ರಾಹುಲ್​ ಭರ್ಜರಿ ಬ್ಯಾಟಿಂಗ್​ ನಡೆಸಿದ್ದರು. ಆದರೆ, ಅದೃಷ್ಟವಶಾತ್ ಆ ಪಂದ್ಯವನ್ನ ಆರ್​​ಸಿಬಿ ಗೆದ್ದುಕೊಂಡಿತ್ತು.

ಎರಡು ಬಾರಿ ಬಚಾವಾದ ಡಿವಿಲಿಯರ್ಸ್​
ಗೋಪಾಲ್​ ಎಸೆತದಲ್ಲಿ ಕ್ರೀಸ್​ನಿಂದ ಮುಂದೆ ಬೌಲ್ ಪಿಕ್ ಮಾಡ್ತಿದ್ದ ಡಿವಿಲಿಯರ್ಸ್​ ಬೀಟ್​ ಮಾಡಿದರು. ಈ ವೇಳೆ ಕೀಪರ್ ಜೊಸ್ ಬಟ್ಲರ್ ಸ್ಟಂಪಿಂಗ್ ಚಾನ್ಸ್​ ಮಿಸ್​ ಮಾಡಿದರು. ನಂತರದ ಓವರ್​ನಲ್ಲೇ ಕೊಹ್ಲಿ ಜೊತೆ ರನ್​ ಕದಿಯುವ ಯತ್ನದಲ್ಲಿ ಇನ್ನೊಂದು ಬದಿಯ ಕ್ರೀಸ್​ ಬಳಿ ಹೋಗಿದ್ದ ಡಿವಿಲಿಯರ್ಸ್​ ವಾಪಸ್ಸಾಗಿ ರನೌಟ್​ನಿಂದ ಬಚಾವಾದರು. ಆದರೆ, 20 ರನ್​ ಗಳಿಸಿದ್ದಾಗ, ಶ್ರೇಯಸ್​ ಗೋಪಾಲ್​​ ಎಸೆತದಲ್ಲೇ ಉನದ್ಕಟ್​​ಗೆ ಕ್ಯಾಚ್ ನೀಡಿ ಔಟಾದರು.

ಸಾಧ್ಯವಾದಷ್ಟು ಪ್ರಯತ್ನಪಟ್ಟ ಮನ್​ದೀಪ್​-ವಾಷಿಂಗ್​ಟನ್​
ಆರ್​ಸಿಬಿ 126 ರನ್​ ಗಳಿಸಿದ್ದಾಗ, 15ನೇ ಓವರ್​ನಲ್ಲಿ ಮನ್​ದೀಪ್​ ಸಿಂಗ್​​ಗೆ ಜತೆಯಾದ ವಾಷಿಂಗ್​ಟನ್​ ಸುಂದರ್​, ಉತ್ತಮ ಬ್ಯಾಟಿಂಗ್ ನಡೆಸಿದರು. ಆದರೆ, ಎಷ್ಟೇ ಸಿಕ್ಸರ್​ ಹಾಗೂ ಬೌಂಡರಿಗಳನ್ನ ಸಿಡಿಸಿದರೂ ಅದು ಗೆಲುವಿನ ಗುರಿ ಮುಟ್ಟೋಕೆ ಸಾಕಾಗಲಿಲ್ಲ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍