ಪಂತ್ ಶತಕ 128*(63) ವ್ಯರ್ಥ, ಶಿಖರ್ ಧವನ್ – ಕೇನ್ ವಿಲಿಯಮ್ಸನ್ ಬೊಂಬಾಟ್ ಆಟಕ್ಕೆ ಹೈರಾಣಾದ ಡೆಲ್ಲಿ..! ಜಯದೊಂದಿಗೆ ಸನ್​ರೈಸರ್ಸ್ ಹೈದರಾಬಾದ್ ಮೊದಲ ತಂಡವಾಗಿ ಪ್ಲೇ ಆಫ್ ಹಂತಕ್ಕೆ ಲಗ್ಗೆ..!!

ದೆಹಲಿ: ಯಂಗ್ ಬಾಯ್ ರಿಷಭ್ ಪಂತ್ ಸಿಡಿಸಿದ ದಾಖಲೆಯ ಶತಕ ಡೆಲ್ಲಿ ಡೇರ್​ಡೆವಿಲ್ಸ್ ತಂಡಕ್ಕೆ ಗೆಲುವು ದಕ್ಕಲಿಲ್ಲ. ಸೀನಿಯರ್ ಜೋಡಿ ಶಿಖರ್ ಧವನ್ ಹಾಗೂ ಕೇನ್ ವಿಲಿಯಮ್ಸನ್ ಸ್ಪೋಟಕ ಬ್ಯಾಟಿಂಗ್​ಗೆ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್​ಗಳಿಂದ ಭರ್ಜರಿ ಜಯಗಳಿಸಿತು.

ಫಿರೋಜ್ ಷಾ ಕೋಟ್ಲ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ರೊಷಬ್ ಪಂತ್ ಅಬ್ಬರದ ಶತಕದ ನೆರವಿನಿಂದ 5 ವಿಕೆಟ್​ಗೆ 187 ರನ್​ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ ಸನ್​ರೈಸರ್ಸ್ ಹೈದರಾಬಾದ್ 18.5 ಓವರ್​ಗಳಲ್ಲಿ ಕೇವಲ 1 ವಿಕೆಟ್​ಗೆ 191 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಫಲ ನೀಡದ ಪಂತ್ ಶತಕ

ಬಲಿಷ್ಠ ಬೌಲಿಂಗ್ ಪಡೆ ಇರುವ ಸನ್‌ರೈಸರ್ಸ್‌ ತಂಡವು ಆರಂಭಿಕ ಹಂತದಲ್ಲಿ ಯಶಸ್ಸು ಸಾಧಿಸಿತು. ಡೆಲ್ಲಿ ನಾಲ್ಕು ಓವರ್‌ಗಳಲ್ಲಿ 21 ರನ್‌ ಗಳಿಸಿದ್ದಾಗ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಇನ್ನೊಂದು ಬದಿಯಲ್ಲಿದ್ದ ರಿಷಭ್ ಮಾತ್ರ ಬೌಲರ್‌ಗಳನ್ನ ಬೆವರಿಳಿಸಿದ್ರು.

ಅಂತಿಮವಾಗಿ 63 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸ್​​ನೊಂದಿಗೆ ಅಜೇಯ 128 ರನ್​ ಸಿಡಿಸಿ ಮಿಂಚಿದ್ರು.

ಧವನ್-ವಿಲಿಯಮ್ಸನ್ ಜುಗಲ್​​​ಬಂದಿ

ಸನ್​ರೈಸರ್ಸ್​​​​ಗೆ ಆರಂಭದಲ್ಲೇ ಅಲೆಕ್ಸ್ ಹೇಲ್ಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದ್ರೆ, 2ನೇ ವಿಕೆಟ್​​ಗೆ ಜೊತೆಯಾದ ಧವನ್​ ಹಾಗೂ ವಿಲಿಯಮ್ಸನ್​ ಭರ್ಜರಿ ಆಟ ಪ್ರದರ್ಶಿಸಿದ್ರು.

ಡೆಲ್ಲಿ ಬೌಲರ್ಸ್​ಗಳ ಚೆಂಡಾಡಿದ ಈ ಜೋಡಿ ಡೆಲ್ಲಿ ಗೆಲುವಿಗೆ ಮುಳುವಾದರು. 2ನೇ ವಿಕೆಟ್​​ಗೆ ಈ ಜೋಡಿ 176 ರನ್​​​​​​​​​​​​​​​​​ ಕಲೆಹಾಕಿತು. ಧವನ್ ಕೇವಲ 50 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 92 ರನ್ ಸಿಡಿಸಿದರೆ, ನಾಯಕ ಕೇನ್ ವಿಲಿಯಮ್ಸನ್ 53 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​​​​ನೊಂದಿ 83 ರನ್ ಸಿಡಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಈ ಮೂಲಕ ಎಸ್​​​ಆರ್​ಹೆಚ್ ಪ್ಲೇ ಆಫ್​​ಗೆ ಎಂಟ್ರಿಕೊಟ್ಟಿತು.

ಕಂಪ್ಲೀಟ್ ಸ್ಕೋರ್ ಬೋರ್ಡ್ ಇಲ್ಲಿದೆ :

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍

>
%d bloggers like this: