ತಮ್ಮ ಪ್ರಾಪರ್ಟಿಗಳನ್ನು ಮಾರಿಕೊಳ್ಳೋಕೆ ಮುಂದಾದ ಕ್ಯಾಪ್ಟನ್ ಸ್ಟೀವ್ ಸ್ಮಿತ್​ ಹಾಗೂ ಡೆವಿಡ್​ ವಾರ್ನರ್​..!

ಆಸ್ಟ್ರೇಲಿಯಾ ಮಾಜಿ ಕ್ಯಾಪ್ಟನ್​ ಸ್ಟೀವ್​ ಸ್ಮಿತ್ ಹಾಗೂ ಮಾಜಿ ವೈಸ್ ಕ್ಯಾಪ್ಟನ್​ ಡೆವಿಡ್​ ವಾರ್ನರ್​ಗಳಿಗೀಗ ಬರಬಾರದ ಪರಿಸ್ಥಿತಿ ಬಂದೊದಗಿದೆ. ಕ್ರಿಕೆಟ್​ನಿಂದಾಗಿ ಮಿಲಿಯನ್​ ಡಾಲರ್​ಗಟ್ಟಲೇ ಆದಾಯ ಹೊಂದಿದ್ದ ಇವರು, ಸಾಕಷ್ಟು ಪ್ರಾಪರ್ಟಿ ಖರೀದಿಸಿದ್ದರು. ಹೇಗೂ ದುಡ್ಡು ಬರುತ್ತೆ ಅಂತ ಇದಕ್ಕಾಗಿ ಮೈತುಂಬ ಸಾಲಗಳನ್ನು ಮಾಡಿಕೊಂಡಿದ್ದರು. ಆದರೆ, ಅವೆಲ್ಲವನ್ನೂ ಮೆಂಟೇನ್​ ಮಾಡೋಕಾಗದೇ ಈ ಜೋಡಿ ಆಸ್ತಿಗಳನ್ನ ಮಾರಿಕೊಳ್ಳಲು ಮುಂದಾಗಿದೆ.

ಶ್ರೀಮಂತ ಕ್ರಿಕೆಟರ್​ಗಳಾಗಿದ್ದ ಈ ಇಬ್ಬರು ಚೆಂಡು ವಿರೂಪಗೊಳಿಸುವ ಕಳ್ಳಾಟ ನಡೆಸಿ ಸಿಕ್ಕಿಬಿದ್ದಿದ್ದರಿಂದ, ಇದೀಗ ಮನೆ ಮಠ ಮಾರಿಕೊಳ್ಳುವಂತಾಗಿದೆ. ಕ್ರಿಕೆಟ್​ ಆಸ್ಟ್ರೇಲಿಯಾ ಹಾಗೂ ಐಪಿಎಲ್​ನಿಂದ ಬರಲಿದ್ದ ಕೋಟಿಗಟ್ಟಲೇ ದುಡ್ಡನ್ನ ಕಳೆದುಕೊಂಡಿರುವ ಈ ಇಬ್ಬರಿಗೂ, ತಮ್ಮ ಆಸ್ತಿಗಳನ್ನ ಮಾರಾಟ ಮಾಡಿಕೊಳ್ಳೋದೊಂದೆ ದಾರಿಯಾಗಿ ಉಳಿದಿದೆ.

ಮನೆಗಳನ್ನ ಖರೀದಿಸಿ ರಿನೋವೇಟ್​ ಮಾಡಲಾಗದೇ ಸಿಲುಕಿಕೊಂಡ ಜೋಡಿ:

ಇನ್ನು, ಸಿಡ್ನಿ ಹಾರ್ಬರ್​ ಸೇತುವೆ ಬಳಿ 3 ಬಿಎಚ್​ಕೆ ಮನೆ ಖರೀದಿಸಿದ್ದ ಸ್ಮಿತ್​, ಅದನ್ನ ರಿನೋವೇಟ್​ ಮಾಡೋ ಪ್ಲ್ಯಾನ್​ದಲ್ಲಿದ್ದರು. ಆದರೆ, ಅದು ಹಾಗೇ ಬಾಕಿ ಉಳಿದಿದ್ದು, ಇದ್ದ ಬೇರೆ ಎರಡು ಮನೆಗಳನ್ನೂ ಸ್ಮಿತ್​ ಬಾಡಿಗೆ ನೀಡೋಕೆ ಮುಂದಾಗಿದ್ದಾರೆ. ಈ ಹಿಂದೆ ಸಿಡ್ನಿಯ ಮರೋಬ್ರಾದಲ್ಲಿ ಮನೆಯೊಂದನ್ನ ಕೊಂಡುಕೊಂಡಿದ್ದ ವಾರ್ನರ್​, ಅದನ್ನ ಕೆಡವಿ 5 ಅಂತಸ್ತಿನ ಹೊಸ ಮನೆ ಕಟ್ಟೋಕೆ ರೆಡಿಯಾಗಿದ್ದರು. ವಾರ್ನರ್​ ಪತ್ನಿ ಕ್ಯಾಂಡಿಸ್​ ಹಾಗೂ ಅವರ ಮಕ್ಕಳು ಈ ಮನೆಗೆ ಶಿಫ್ಟ್​ ಆಗೋ ಪ್ಲ್ಯಾನ್​ ಮಾಡಿದ್ರು. ಲಾಸ್​ನಿಂದಾಗಿ ಅದೆಲ್ಲ ಇನ್ನೂ ಕನಸಾಗೇ ಉಳಿದಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍