ಮೆಸ್ಸಿ ದಾಖಲೆ ಸರಿಗಟ್ಟಿ ವಿಶ್ವದಾಖಲೆ ಬರೆದ ದೇಶದ ಹೆಮ್ಮೆಯ ಪುತ್ರ ಸುನಿಲ್ ಚೆಟ್ರಿ..! ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಭಾರತ ಚ್ಯಾಂಪಿಯನ್..!

ಮುಂಬೈ: ಕ್ರಿಕೆಟ್​ನಲ್ಲಿ ಟೀಂ ಇಂಡಿಯಾದ ಒಂದೊಂದು ಸಾಧನೆಯನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. ಆದರೆ, ಪುಟ್​ಬಾಲ್​ ಆಟ, ಮೊದಲಿನಿಂದಲೂ ದೇಶದ ಕ್ರೀಡಾಭಿಮಾನಿಗಳ ಗಮನವನ್ನ ಕ್ರಿಕೆಟ್​ನಷ್ಟು ಸೆಳೆದಿಲ್ಲ. ಈ ಬೇಸರದಿಂದಲೇ ದೇಶದ ಹೆಮ್ಮೆಯ ಪುಟ್​ಬಾಲ್​ ಆಟಗಾರ ಸುನೀಲ್​ ಚೆಟ್ರಿ ಕ್ರೀಡಾಂಗಣಕ್ಕೆ ಬಂದು ಆಟ ನೋಡಿ..ಅಲ್ಲಿ ನೀವು ನಮಗೆ ಬೇಕಾದ್ರೆ ಉಗಿರಿ, ಬೈಯ್ರಿ ಏನು ಬೇಕಾದ್ರೂ ಅನ್ನಿ ಎಂದಿದ್ದರು. ಅವರ ಭಾವನಾತ್ಮಕ ಮಾತಿಗೋ ಏನೋ? ಪ್ರಸ್ತುತ ನಡೆಯುತ್ತಿದ್ದ ಇಂಟರ್​ಕಾಂಟಿನೆಲ್​ ಪಂದ್ಯಾವಳಿಯ ಉಳಿದ ಮ್ಯಾಚ್​ಗಳು ಹೌಸ್​ಪುಲ್​ ಕೆಲಕ್ಷನ್​ ಕಂಡಿದ್ದವು.

ಪ್ಲೇಕ್ಷಕರ ಈ ಅಭೂತಪೂರ್ವ ರೆಸ್ಪಾನ್ಸ್​ಗೆ ಟೀಂ ಇಂಡಿಯಾ ನಿರಾಸೆ ಮಾಡಿಲ್ಲ. ಇಂಟರ್​ ಕಾಂಟಿನೆಂಟಲ್​ ಕಪ್​ ಗೆದ್ದು ತಂಡ ಚಾಂಪಿಯನ್​ ಎನಿಸಿಕೊಂಡರೆ, ಸುನಿಲ್​ ಚೆಟ್ರಿ ವಿಶ್ವದಾಖಲೆಯ ಸಾಧನೆ ಬರೆದು, ಭಾರತದ ಕೀರ್ತಿ ಪತಾಕೆಯನ್ನ ಪುಟ್​ಬಾಲ್​ ಗ್ರೌಂಡ್​ನಲ್ಲಿ ಜಗಮೆಚ್ಚುವಂತೆ ಹಾರಿಸಿದ್ದಾರೆ.

ಸುನಿಲ್‌ ಚೆಟ್ರಿ ಕಾಲ್ಚಳಕದಲ್ಲಿ ಭಾರತ ಫೈನಲ್​ ಮ್ಯಾಚ್​ನಲ್ಲಿ ಕೀನ್ಯಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದೆ. ಮುಂಬೈನ ಸ್ಪೋರ್ಟ್ಸ್​ ಅರೇನಾ ಕ್ಲಬ್​ನಲ್ಲಿ ತುಂಬಿ ತುಳುಕುತ್ತಿದ್ದ 18 ಸಾವಿರಕ್ಕೂ ಅಧಿಕ ಮಂದಿಯ ಎದುರು ಚೆಟ್ರಿ, ನಾವೇ ಚಾಂಪಿಯನ್​ ಎಂದು ಮೆರೆದಿದ್ದಾರೆ. ಕಪ್​ ಎತ್ತಿ ಹಿಡಿದು, ಭವಿಷ್ಯದ ಪುಟ್​ಬಾಲ್​ ಹಾದಿಯ ಮುನ್ನೋಟಕ್ಕೆ ಸಾಕ್ಷಿಯಾದರು. ಎರಡು ಗೋಲ್ ಗಳ ನೆರವಿನಿಂದ ಕೀನ್ಯಾವನ್ನ ಸೆದೆಬಡಿದ ಚೆಟ್ರಿ, ಅಂತಾರಾಷ್ಟ್ರೀಯ ಫುಟ್ಬಾಲ್ ನಲ್ಲಿ ಎರಡನೇ ಅತ್ಯಧಿಕ ಗೋಲ್ ಗಳಿಸಿದ್ದ ಲಿಯೋನೆಲ್‌ ಮೆಸ್ಸಿ (64) ದಾಖಲೆಯನ್ನು ಸರಿಗಟ್ಟಿದ್ರು.

ಪುಟ್​ಬಾಲ್​ ಜಗತ್ತಿನ ಟಾಪ್​ಮೋಸ್ಟ್​ ಗೋಲ್​ ದಾಖಲೆಗಾರ ಕ್ರಿಸ್ಟಿಯಾನೋ ರೋನಾಲ್ಡೋ ಮೊದಲ ಸ್ಥಾನದಲ್ಲಿದ್ದು 81 ಗೋಲ್​ಗಳನ್ನ ದಾಖಲಿಸಿದ್ದಾರೆ. ಅವರ ಸಾಧನೆ ಸರಿಗಟ್ಟುವ ಸಮರೋತ್ಸಾಹದಲ್ಲಿರುವ ಸುನಿಲ್​ ಚೆಟ್ರಿಯ ಒಟ್ಟಾರೆ ಗೋಲ್ 64 . ಟೂರ್ನಿಯುದ್ದಕ್ಕೂ ಅದ್ಭುತ ಆಟ ಪ್ರದರ್ಶನ ನೀಡಿರೋ ಫಾರ್ವರ್ಡ್‌ ಸ್ಟ್ರೈಕರ್​, ಸುನಿಲ್‌ ನಾಲ್ಕು ಪಂದ್ಯಗಳಲ್ಲಿ 8 ಗೋಲ್​ ಗಳಿಸಿದ್ದಾರೆ. ಇನ್ನು ನಿನ್ನೆಯ ಪಂದ್ಯದಲ್ಲಿ ಚೆಟ್ರಿ 8 ಮತ್ತು 29ನೇ ನಿಮಿಷದಲ್ಲಿ ಎರಡು ಗೋಲ್‌ ದಾಖಲಿಸಿ ವಿಜಯದ ಚಪ್ಪಾಳೆಗಿಟ್ಟಿಸಿಕೊಂಡರು.

India’s soccer player Sunil Chhetri, right,controls the ball from an identified Kenyan player, during the Hero Intercontinental Cup final match in Mumbai, India, Sunday, June 10, 2018. (AP Photo/Rafiq Maqbool)

ಚೆಟ್ರಿಯ ಈ ಸಾಧನೆಯನ್ನು ಅಮಿತಾಬ್​ ಬಚ್ಚನ್​ರಿಂದ ಹಿಡಿದು ಗೃಹಸಚಿವ ಡಾ.ಜಿ ಪರಮೇಶ್ವರ್​ವರೆಗೂ ಸಾವಿರಾರು ಗಣ್ಯರು ಸೋಶಿಯಲ್​ ಮೀಡಿಯಾದಲ್ಲಿ ಕೊಂಡಾಡಿದ್ದಾರೆ. ಇನ್ನೂ ಕೋಟ್ಯಾಂತರ ಅಭಿಮಾನಿಗಳಿಗಂತೂ ಚೆಟ್ರಿಯ ಸಾಧನೆ ಹಾಗೂ ಚಾಂಪಿಯನ್​ ಆದ ಟೀಂ ಇಂಡಿಯಾ ಹೆಮ್ಮೆ ತಂದಿಟ್ಟಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..