ಬಿಜೆಪಿ ಸೇರ್ತಾರಾ ರಾಹುಲ್​ ದ್ರಾವಿಡ್​ -ಅನಿಲ್​ ಕುಂಬ್ಳೆ..?

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಪಕ್ಷಾಂತರ ಪರ್ವ ಕೂಡ ಜೋರಾಗಿದೆ. ಹೀಗಿರುವಾಗ್ಲೇ ಭಾರತೀಯ ಜನತಾ ಪಕ್ಷ ಕರ್ನಾಟಕದ ಇಬ್ಬರು ಕ್ರಿಕೆಟ್​ ಸೂಪರ್​ ಸ್ಟಾರ್​ಗಳನ್ನ ಪಕ್ಷಕ್ಕೆ ಕರೆತರಲು ಇನ್ನಿಲ್ಲದ ಕಸರತ್ತು ನಡೆಸಿದೆ. ಆ ಇಬ್ಬರು ಸೂಪರ್​ ಸ್ಟಾರ್​ಗಳು ಬೇರಾರೂ ಅಲ್ಲ.. ಅದು ಇವರೇ ಟೀಮ್​ ಇಂಡಿಯಾದ ವಾಲ್​ ಎನಿಸಿಕೊಂಡಿದ್ದ ರಾಹುಲ್​ ದ್ರಾವಿಡ್ ಹಾಗೂ ಜಂಬೂ ಖ್ಯಾತಿಯ ಲೆಗ್ ಸ್ಪಿನ್ನರ್​ ಅನಿಲ್​ ಕುಂಬ್ಳೆ.
ಕರ್ನಾಟಕದಲ್ಲೇ ಹುಟ್ಟಿ ಟೀಮ್​ ಇಂಡಿಯಾದ ಕ್ಯಾಪ್ಟನ್​ ಆಗಿದ್ದ ದ್ರಾವಿಡ್​ ಮತ್ತು ಕುಂಬ್ಳೆ ಬಗ್ಗೆ ಕನ್ನಡಿಗರಲ್ಲಿ ಇನ್ನಿಲ್ಲದ ಗೌರವವಿದೆ. ಜೊತೆಗೆ ಈ ಇಬ್ಬರೂ ಮಾಜಿ ಆಟಗಾರರು ತಮ್ಮ ಕೆರಿಯರ್​ ಉದ್ದಕ್ಕೂ ವಿವಾದಗಳಿಂದ ದೂರವೇ ಉಳಿದವರು. ಕುಂಬ್ಳೆ ಮತ್ತು ದ್ರಾವಿಡ್​ ಬಿಜೆಪಿಯನ್ನ ಸೇರಿದ್ರೆ ಕರ್ನಾಟಕದಲ್ಲಿ ಪಕ್ಷದ ಇಮೇಜ್​ ಹೆಚ್ಚಾಗುತ್ತೆ ಅನ್ನೋದು ಕೇಂದ್ರ ನಾಯಕರ ಲೆಕ್ಕಾಚಾರ. ಇದೇ ಕಾರಣಕ್ಕೆ ದ್ರಾವಿಡ್​ ಹಾಗೂ ಕುಂಬ್ಳೆಯವರನ್ನ ಪಕ್ಷಕ್ಕೆ ಸೆಳೆಯಲು ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ಪಕ್ಷದ ದೊಡ್ಡ ದೊಡ್ಡ ನಾಯಕರೇ ದ್ರಾವಿಡ್​ ಮತ್ತು ಕುಂಬ್ಳೆ ಜೊತೆಯಲ್ಲಿ ಎರಡು ಮೂರು ಬಾರಿ ಮಾತುಕತೆ ನಡೆಸಿದ್ದಾರೆ. ಅಕಸ್ಮಾತ್​ ಇಬ್ಬರೂ ಮಾಜಿ ಕ್ರಿಕೆಟರ್​ಗಳು ಬಿಜೆಪಿ ಸೇರಿದ್ದೇ ಆದ್ರೆ, 2019ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್​ ಅಥವಾ ರಾಜ್ಯಸಭೆಗೆ ಕಳುಹಿಸುವ ಆಫರ್​ ಕೂಡ ನೀಡಲಾಗಿದೆ.
ದ್ರಾವಿಡ್​ ಮತ್ತು ಕುಂಬ್ಳೆ ಬಿಜೆಪಿ ಸೇರಿದರೆ, ಕೂಡಲೇ ಅವರಿಬ್ಬರನ್ನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಬಿಜೆಪಿ ನಿರ್ಧರಿಸಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಇಬ್ಬರು ಕ್ರಿಕೆಟರ್​ಗಳನ್ನ ಪ್ರಚಾರ ರಾಯಭಾರಿಗಳನ್ನಾಗಿ ಮಾಡೋದು ಬಿಜೆಪಿ ಪ್ಲಾನ್​. ಆದ್ರೆ, ದ್ರಾವಿಡ್​ ಹಾಗೂ ಕುಂಬ್ಳೆ ಇಬ್ಬರಿಗೂ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ. ಹೀಗಾಗಿ ಬಿಜೆಪಿ ಕೊಟ್ಟ ಆಫರ್​ನ್ನ ನಯವಾಗಿಯೇ ತಳ್ಳಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಇಷ್ಟಾದ್ರೂ ದೆಹಲಿ ಮಟ್ಟದಲ್ಲಿ ಇಬ್ಬರು ನಾಯಕರ ಮನವೊಲಿಕೆ ಪ್ರಯತ್ನ ನಡೆದಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍