ಕ್ರೀಡಾಪಟುಗಳ ಆದಾಯದಲ್ಲಿ ಪಾಲು ಕೇಳಿದ ಹರ್ಯಾಣಾ ಸರ್ಕಾರ..! ಸಿಡಿಮಿಡಿಗೊಂಡ ಕ್ರೀಡಾಪಟುಗಳು.. ಅಷ್ಟಕ್ಕೂ ಏನಿದು ಪ್ರಕರಣ?

ಹರ್ಯಾಣದ ಕ್ರೀಡಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಅಶೋಕ್ ಖೇಮ್ಕಾ ನೀಡಿರುವ ಸೂಚನೆಯೊಂದು ರಾಜ್ಯ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ. ಖೇಮ್ಕಾ ಸಹಿ ಮಾಡಿರುವ ಈ ಆದೇಶದ ಪ್ರತಿಯಲ್ಲಿ ರಾಜ್ಯದ ಕ್ರೀಡಾಪಟುಗಳು ತಮ್ಮ ಆದಾಯದ ಮೂರನೇ ಒಂದು ಭಾಗವನ್ನು ಸ್ಪೋರ್ಟ್ಸ್ ಕೌನ್ಸಿಲ್ ಫಂಡ್ ಗೆ ನೀಡುವಂತೆ ಹೇಳಲಾಗಿದೆ.

ಸರ್ಕಾರದ ಈ ಆದೇಶ ಹರ್ಯಾಣ ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕುಸ್ತಿಪಟು ಯೋಗೇಶ್ವರ್ ದತ್ ಟ್ವೀಟ್ ಮಾಡಿದ್ದು ಖೇಮ್ಕಾ ಕ್ರಮವನ್ನು ಖಂಡಿಸಿದ್ದಾರೆ. ಇಂಥ ಅಧಿಕಾರಿಗಳಿಂದ ದೇವರೇ ನಮ್ಮನ್ನು ಕಾಪಾಡಬೇಕು. ಅಧಿಕಾರಕ್ಕೆ ಬಂದಾಗಿನಿಂದ ತಲೆಬುಡ ಯೋಚನೆ ಮಾಡದೆ ತುಘಲಕ್ ಆದೇಶ ಜಾರಿಗೆ ತರ್ತಿದ್ದಾರೆ. ಹರ್ಯಾಣದ ಕ್ರೀಡಾ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಶೂನ್ಯ. ಹರ್ಯಾಣದ ಹೊಸ ಕ್ರೀಡಾಪಟು ಪಲಾಯನ ಮಾಡಿದ್ರೆ ಅದ್ರ ಹೊಣೆ ನೀವು ಹೊರಬೇಕೆಂದು ಯೋಗೇಶ್ವರ್ ಟ್ವೀಟ್ ಮಾಡಿದ್ದಾರೆ.

ಏಪ್ರಿಲ್ 30ರಂದು ಹೊರಡಿಸಿರುವ ಆದೇಶದಲ್ಲಿ ರಾಜ್ಯ ಸರ್ಕಾರ ರಾಜ್ಯದ ಕ್ರೀಡಾಪಟುಗಳ ಆದಾಯದಲ್ಲಿ ಮೂರನೇ ಒಂದು ಭಾಗವನ್ನು ನೀಡುವಂತೆ ಸೂಚನೆ ನೀಡಿದೆ. ರಾಜ್ಯದ  ಕ್ರೀಡಾ ಅಭಿವೃದ್ಧಿಗಾಗಿ ಈ ನಿಧಿಯನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..