ಏರ್ ಟೆಲ್ ನೀಡುತ್ತಿದೆ ಬಂಪರ್ ಆಫರ್, ಕೇವಲ 5 ರೂ.ಗೆ 4 ಜಿಬಿ ಡಾಟಾ!? ನಂಬಲಾಗದಿದ್ದರೆ ಈ ಸುದ್ದಿ ಓದಿದ ತಕ್ಷಣ ನಿಮ್ಮ ಹತ್ತಿರದ ಆಪರೇಟರ್’ಗಳನ್ನ ಸಂಪರ್ಕಿಸಿ..

airtal offer - kannada naadi news

ಈಗ ಡಾಟಾ ನೀಡುವ ಸಲುವಾಗಿ ಕಂಪನಿಗಳ ನಡುವೆ ಸಮರ ಶುರುವಾಗಿದೆ ಎಂದರೆ ತಾಪ್ಪಾಗಲ್ಲ. ಹೌದು, ರಿಲಯನ್ಸ್ ಜಿಯೋ ಪ್ರಾರಂಭವಾದ ದಿನದಿಂದ ಉಳಿದ ಕಂಪನಿಗಳಿಗೆ ನಡುಕ ಶುರುವಾಗಿದೆ. ಇದ್ದರಿಂದಾಗಿ ದಿನದಿಂದ ದಿನಕ್ಕೆ ಹೊಸ ಹೊಸ ಆಫರ್’ಗಳನ್ನು ನೀಡುತ್ತಿವೆ ಉಳಿದ ಡಾಟಾ ಕಂಪನಿಗಳು.

airtal offer - kannada naadi news

ಈಗ ಏರ್ ಟೆಲ್ ಕಂಪನಿ ತನ್ನ ಬಳಕೆದಾರರಿಗೆ ಬಹುದೊಡ್ಡ ಆಫರ್ ನೀಡಿದೆ. ಅದು ಕೂಡ ಕೇವಲ 5 ರೂ.ಗೆ 4 ಜಿಬಿ ಡಾಟಾ , 3 ಜಿ ಹಾಗೂ 4ಜಿ ಗಳಲ್ಲಿ ಹಾಗೂ ಕಾಲ್ ಫ್ರೀ ಇರುತ್ತದೆ.

ಆದರೆ ಕಂಪನಿ ಇದಕ್ಕೊಂದು ನಿಯಮವನ್ನು ಜಾರಿ ಮಾಡಿದೆ. ಈ ಆಫರ್ ಎಲ್ಲರಿಗೂ ದೊರೆಯುವುದಿಲ್ಲ. ನಿಮಗೆ ಈ ಹೊಸ ಆಫರ್‌ಗಳನ್ನು ಪಡೆಯುವ ಅರ್ಹತೆಯಿದೆಯೇ ಎನ್ನುವುದನ್ನು ನಿಮ್ಮ ಸ್ಥಳೀಯ ಆಪರೇಟರ್ ಬಳಿ ಪರಿಶೀಲಿಸಬೇಕು.

airtal offer - kannada naadi news

ಈ ಆಫರ್ ಪಡೆದವರು ಕೇವಲ ಏಳು ದಿನಗಳ ವರೆಗೆ ಮಾತ್ರ ಬಳಸಿಕೊಳ್ಳಬಹುದು. ಹಾಗೂ ಇದನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳಲು ಸಾಧ್ಯವಿಲ್ಲ, ಒಮ್ಮೆ ಈ ಆಫರ್ ಪಡೆದವರಿಗೆ ಮತ್ತೆ ಪಡೆಯುವ ಅವಕಾಶ ಇರುವುದಿಲ್ಲ.

airtal offer - kannada naadi news

ಏರ್ ಟೆಲ್ ಈಗಾಗಲೇ 8,15, 40, 349, ಮತ್ತು 399 ರೂ. ಆಫರ್ ಗಳನ್ನು ಬಿಡುಗಡೆ ಮಾಡಿದೆ. ಆದರೆ ಎಲ್ಲರಿಗೂ ಈ ಆಫರ್ ಲಭ್ಯವಿರುವುದಿಲ್ಲ ಎಂದು ಕಂಪನಿ ತಿಳಿಸಿದೆ.