ಫ್ರೀ ಯಾಗಿ ಸಿಗಲಿದೆ “ಜಿಯೋ” ಮೊಬೈಲ್..!!

ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಕಂಪೆನಿ ಬಿಡುಗಡೆ ಮಾಡಿದ ಫ್ರೀ ಜಿಯೋ ಸಿಮ್ ತುಂಬಾ ಹೆಸರು ಮಾಡುವ ಮೂಲಕ ತಮ್ಮ ಕಂಪನಿಯನ್ನು ವಿಶ್ವ ಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳುವಂತೆ ಮಾಡಿತು.

ಅದು ಸಾಲದೆಂಬಂತೆ ಈಗ ಜನರಿಗೆ ಖುಷಿಯಾಗುವಂತಂಹ ಮತ್ತೊಂದು ಕೆಲಸಕ್ಕೆ ಕೈ ಹಾಕಿದೆ.ತನ್ನದೇ ಕಂಪನಿಯ ಹೆಸರಿನಲ್ಲಿ ಒಂದು ಕಡಿಮೆ ಬೆಲೆಯ 4ಜಿ ಫೀಚರ್ ನ ಮೊಬೈಲ್ ಫೋನ್ ನನ್ನು ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಸಭೆಯಲ್ಲಿ ಬಿಡುಗಡೆ ಮಾಡಿದೆ.

Jio free mobile kannada naadi news

ಈ ಪೋನ್ ಗೆ ಮುಂಗಡವಾಗಿ 1500 ರೂಪಾಯಿಯನ್ನು ಪಾಲಿಸಬೇಕು, ಮೂರು ವರ್ಷಗಳ ನಂತರ ನೀವು ನೀಡಿದ ಹಣವನ್ನು ನಿಮಗೆ ಮರುಪಾವತಿಸಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ನ ಮುಖ್ಯಸ್ಥರಾದ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಮೊಬೈಲ್ ಖರೀದಿಸಿದ ಗ್ರಾಹಕರು 153 ರೂಪಾಯಿ ರಿಚಾರ್ಚ್ ಹಾಕಿಸಿ ಕೊಳ್ಳಬೇಕು, ಇದು ಆನ್ ಲಿಮಿಟೆಡ್ ಡಾಟಾ ಪ್ಯಾಕ್ ಆಗಿದ್ದು, ನಾವು ದಿನನಿತ್ಯ ಮಾಡುವ ಕಾಮನ್ ಕರೆಗಳನ್ನು ಹಾಗೂ ಮೆಸೇಜ್ ಅನ್ನು ಇದೇ ಡಾಟಾ ಪ್ಯಾಕ್ ನಿಂದ ಮಾಡಬಹುದಾಗಿದೆ.

Jio free mobile kannada naadi news

ಈ ಮೊಬೈಲ್ ನಲ್ಲಿ ಆಲ್ಫಾ ನ್ಯೂಮರಿಕ್ ಕೀಪ್ಯಾಡ್, 2.4 ಇಂಚಿನ ಕ್ಯೂವಿಜಿಎ ಡಿಸ್ ಪ್ಲೇ, 240*320 ಪಿಕ್ಸೆಲ್ , ಎಸ್ ಡಿ ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದೆ.