ಸೊಳ್ಳೆ, ಜಿರಳೆ ಕಾಟಕ್ಕೆ ಬೇಸತ್ತಿದ್ದೀರಾ..? ಖರೀದಿ ಮಾಡಿ ಈ ಸಾಧನ..!

ಮನೆಯೊಳಗೆ ಸೊಳ್ಳೆ, ಜಿರಳೆ, ನೊಣ, ಜೇಡ ಹೀಗೆ ಕೀಟಾಣುಗಳು ಬಂದ್ರೆ ಕಿರಿಕಿರಿಯಾಗೋದು ಸಹಜ. ಹೇಗಪ್ಪ ಇವನ್ನೆಲ್ಲ ಓಡಿಸೋದು ಎನ್ನುವ ಚಿಂತೆ ಕಾಡುತ್ತದೆ. ಜಿರಳೆ ಓಡಿಸಲು ಒಂದು ಔಷಧಿ, ಇಲಿ ಓಡಿಸಲು ಇನ್ನೊಂದು ಔಷಧಿ, ಜೇಡಕ್ಕೆ ಮತ್ತೊಂದು ಅಂತಾ ಬೇರೆ ಬೇರೆ ಔಷಧಿಗಳನ್ನು ಮಾರುಕಟ್ಟೆಯಿಂದ ಖರೀದಿಸಿ ತರ್ತೇವೆ. ಈ ಔಷಧಿಗಳಿಗೆ ಹಾಕುವ ಕೆಮಿಕಲ್ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಇನ್ಮುಂದೆ ಬೇರೆ ಬೇರೆ ಕೀಟಗಳಿಗೆ ಬೇರೆ ಬೇರೆ ಔಷಧಿ ಮೊರೆ ಹೋಗಬೇಕಿಲ್ಲ. ಒಂದು ಸಾಧನ ನಿಮ್ಮೆಲ್ಲ ಕೆಲಸವನ್ನು ಸುಲಭ ಮಾಡಲಿದೆ. ಇದು ಸೊಳ್ಳೆ, ಜಿರಳೆ, ಇಲಿ ಸೇರಿದಂತೆ ಎಲ್ಲವನ್ನೂ ಮನೆಯಿಂದ ಓಡಿಸಲು ನೆರವಾಗುತ್ತದೆ. ಖುಷಿ ವಿಚಾರವೆಂದ್ರೆ ಇದಕ್ಕೆ ಯಾವುದೇ ಕೆಮಿಕಲ್ ಬಳಸಿಲ್ಲ.

ಇದನ್ನು ಎಷ್ಟು ಸುರಕ್ಷಿತವಾಗಿ ಇಟ್ಟುಕೊಳ್ತಿರೋ ಅಷ್ಟು ದಿನ ಇದು ನಿಮ್ಮ ಬಳಿ ಇರಲಿದೆ. ಬಹು ದೂರದವರೆಗೆ ಯಾವುದೇ ಕೀಟ ಬರದಂತೆ ಇದು ನೋಡಿಕೊಳ್ಳುತ್ತದೆ. ಇದನ್ನು ಒಂದು ಕಡೆಯಿಂದ ಇನ್ನೊಂದು ಕಡೆ ಆರಾಮವಾಗಿ ತೆಗೆದುಕೊಂಡು ಹೋಗಬಹುದು.

ಆನ್ಲೈನ್ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಇದು ಲಭ್ಯವಿದೆ. ಇಲೆಕ್ಟ್ರಿಕ್ ಇನ್ಸೆಕ್ಟ್ ಎಂಡ್ ಪೆಸ್ಟ್ ರಿಜೆಕ್ಟ್, ಪೆಸ್ಟ್ ಕಂಟ್ರೋಲ್ ಸೇರಿದಂತೆ ಬೇರೆ ಬೇರೆ ಹೆಸರಿನಲ್ಲಿ ಇದು ಲಭ್ಯವಿದೆ. ಈ ಸಾಧನ ಫ್ಲಿಪ್ಕಾಟ್ ಹಾಗೂ ಅಮೆಜಾನ್ ನಲ್ಲಿ ಸುಲಭವಾಗಿ ಲಭ್ಯವಿದೆ. 499 ರೂಪಾಯಿಯಿಂದ ಶುರುವಾಗುವ ಈ ಸಾಧನದ ಗರಿಷ್ಠ ಬೆಲೆ 2,200 ರೂಪಾಯಿಯಾಗಿದೆ. ಅಡ್ವಾನ್ಸ್ ತಂತ್ರಜ್ಞಾನವನ್ನು ಇದ್ರಲ್ಲಿ ಬಳಸಲಾಗಿದೆ.

👍👍 ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ 👍👍