ಕಿಚ್ಚನ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡ ಹರ್ಷಿಕಾ ಪೂಣಚ್ಚ..?

harshika punaccha class sudeep fan in twitter-kannadanaadi news- latest kannada news-online kannada news

ಸ್ಯಾಂಡಲ್‌ವುಡ್’ನ ಕ್ಯೂಟ್ ಗರ್ಲ್ ಎಂದೇ ಕರೆಯುವ ನಟಿ ಹರ್ಷಿಕಾ ಪೂಣಚ್ಚ ಕಿಚ್ಚ ಸುದೀಪ್ ಅವರ ಅಭಿಮಾನಿಗೆ ಟ್ವಿಟರ್’ನಲ್ಲಿ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

harshika punaccha class sudeep fan in twitter-kannadanaadi news- latest kannada news-online kannada news

ಈ ಹಿಂದೆ ಹರ್ಷಿಕಾ ತಮ್ಮ ಟ್ವಿಟರ್’ನಲ್ಲಿ ಡಬ್ಸ್ಮ್ಯಾಷ್ ಒಂದನ್ನು ಹಾಕಿದ್ದಾರೆ, ಅದಕ್ಕೆ ಕಿಚ್ಚ ಅಭಿಮಾನಿಯೊಬ್ಬ ‘ಸಿನೆಮಾ ಅವಕಾಶ ಸಿಕ್ತಿಲ್ಲ ಅಂತ ಡಬ್ ಸ್ಮ್ಯಾಶ್ ಮಾಡ್ತೀದ್ಯ ಚಿನ್ನ’ ಎಂದು ಮಲ್ಲಿಕಾರ್ಜುನ್ ಎಂಬಾತ ಟ್ವಿಟ್ ಮಾಡಿದ್ದಾನೆ. ಮತ್ತೋರ್ವ ವ್ಯಕ್ತಿ, ಆಕೆಯ ಸಿನೆಮಾ ನೋಡ್ಬೇಡಿ ಜಾಬ್‌ಲೆಸ್ ಆಗ್ತೀವಿ ಎಂದಿದ್ದಾರೆ.

harshika punaccha class sudeep fan in twitter-kannadanaadi news- latest kannada news-online kannada news

ಇದಕ್ಕೆ ಮರು ಟ್ವಿಟ್ ಮಾಡಿ, ಸುದೀಪ್ ಅವರ ಅಭಿಮಾನಿಯಾಗಿ ಈ ರೀತಿ ಮಾತನಾಡೋಕೆ ನಾಚಿಕೆಯಾಗುದಿಲ್ವ, ಥೂ ನಿನ್ನ ಜನ್ಮಕ್ಕೆ, ನಾನು ಬಿಡುವಿನ ಸಮಯದಲ್ಲಿ ಇದನ್ನೆಲ್ಲ ಮಾಡುತ್ತಿರುತ್ತೇನೆ, ನನಗೆ ಬೇಕಾದಷ್ಟು ಸಿನೆಮಾ ಹಾಗೂ ಕೆಲಸ ಇದೆ, ನಿನಗೆ ಇಲ್ಲವೇನು.., ನಿನ್ನ ಟ್ವಿಟ್’ಗೆ ಕಾಮೆಂಟ್ ಲೈಕ್ ಬರುದಿಲ್ಲ ಅಂತ ಹೀಗೆ ಮಾಡಬೇಡ, ನಮಗೆ ನೋವಾದಾಗ ನೇರ ಉತ್ತರ ನೀಡಬೇಕು ಎಂದು ನಾನು ಸುದೀಪ್ ಅವರಿಂದ ತಿಳಿದುಕೊಂಡಿದ್ದೇನೆ ಎಂದು ಹಿಗ್ಗಾ ಮುಗ್ಗಾ ಕ್ಲಾಸ್ ತೆಗೆದು ಕೊಂಡಿದ್ದಾರೆ.

harshika punaccha class sudeep fan in twitter-kannadanaadi news- latest kannada news-online kannada news

ಹರ್ಷಿಕಾ ಪೂಣಚ್ಚ ಈಗ ಕನ್ನಡ ಮಾತ್ರವಲ್ಲದೆ, ತೆಲುಗು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು, ಚಿಟ್ಟೆ ಚಿತ್ರಕ್ಕಾಗಿ ತಮ್ಮ ಇಡೀ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡು ಈ ಹಿಂದೆ ಸದ್ದು ಮಾಡಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ…