ಪ್ರೇಯಸಿಯ ಮನವೊಲಿಕೆಗಾಗಿ, ಊರ ತುಂಬಾ ಬ್ಯಾನರ್ ಕಟ್ಟಿದವನಿಗೆ ಬಿತ್ತು ಭಾರೀ ದಂಡ..!

ಇಂಟರ್ನೆಟ್ ಪ್ರೇಮ ಸಂದೇಶಗಳನ್ನ ಕಳಿಸೋರು ಇರ್ತಾರೆ. ಹಾಗೇನೆ ಇಂಟರ್ನೆಟ್ ನಲ್ಲಿ ಪ್ರೀತಿಯನ್ನ ಹುಡುಕಿಕೊಂಡವರು ಇದ್ದಾರೆ. ಈಗ ಇದೇ ಇಂಟರ್ನೆಟ್ ಲೋಕ ವಿಚಿತ್ರ ಪ್ರೇಮದ ಕಥೆಯೊಂದನ್ನ ಸಿಕ್ಕಾಪಟ್ಟೆ ವೈರಲ್ ಮಾಡ್ತಿದೆ.

ಪುಣೆಯ 25 ವರ್ಷದ ನಿಲೇಶ್ ಕೇಡ್ಕರ್ ಎಂಬ ಯುವಕ ತನ್ನ ಪ್ರೇಯಸಿಗೆ ಕ್ಷಮೆ ಕೇಳೋದಕ್ಕೆ ಐ ಆಮ್ ಸಾರಿ ಅನ್ನೋ ಸಂದೇಶವಿರುವ 300 ಬ್ಯಾನರ್ ಗಳನ್ನ ಇಡೀ ನಗರದ ತುಂಬ ಕಟ್ಟಿದ್ದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದರಿಂದ ತನ್ನ ಪ್ರೇಯಸಿಯ ಹೃದಯ ಕರಗಿ ಆಕೆ ತನ್ನನ್ನ ಕ್ಷಮಿಸಬಹುದು ಅಂತ ಆತ ಅಂದುಕೊಂಡಿದ್ದ. ಆದ್ರೆ ಇಲ್ಲಿ ಆಗಿರೋದೇ ಬೇರೆ. ಬ್ಯಾನರ್ ಕಟ್ಟಿದ ನಿಲೇಶ್ ಕೇಡ್ಕರ್ ನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಗೆ ಬ್ಯಾನರ್ ಕಟ್ಟಿದ ತಪ್ಪಿಗೆ 72,000 ರೂಪಾಯಿ ದಂಡವನ್ನು ವಿಧಿಸಿದ್ದಾರೆ. ಅಷ್ಟೇ ಅಲ್ಲ ನಿಲೇಶ್ ಕೇಡ್ಕರ್ ನ ಪ್ರೇಯಸಿ ಆತನನ್ನ ಖಂಡಿತ ಕ್ಷಮಿಸೋದಕ್ಕೆ ಸಾಧ್ಯವಿಲ್ಲ. ಏಕಂದ್ರೆ ನಿಲೇಶ್ ಗೆ ವಿಧಿಸಿರುವ ದಂಡದ ಮೊತ್ತದಲ್ಲಿ ಅರ್ಧವನ್ನು ಆಕೆ ಕೂಡ ಕಟ್ಟಬೇಕಿದೆ.

ಪುಣೆ ನಾಗರಿಕರು ಕೂಡ ಹೀಗೊಂದು ಲವ್ ಸ್ಟೋರಿಯನ್ನ ನೋಡಿ ಬೆಕ್ಕಸಬೆರಗಾಗಿದ್ದಾರೆ. ಈ ಮಧ್ಯೆ ನಿಲೇಶ್ ಕೇಡ್ಕರ್ ಗೆ ಬ್ಯಾನರ್ ಕಟ್ಟುವ ವಿಚಾರದಲ್ಲಿ ಸಹಾಯ ಮಾಡಿದ ವಿಲಾಸ್ ಶಿಂಧೆ ಎಂಬಾತನಿಗೆ ಕೂಡ ಪೊಲೀಸರು ಕೊಂಚ ಬಿಸಿ ಮುಟ್ಟಿಸಿದ್ದಾರೆ. ಏನೇ ಆದ್ರು ಈ ಸ್ಟೋರಿ ತಿಳಿದ ಮೇಲೆ ನೆಟ್ಟಿಜನ್ಸ್ ಅವನ ಪ್ರೀತಿಗೆ ಬಂದ ಸ್ಥಿತಿ ನೋಡಿ ಅಯ್ಯೋ ಪಾಪ ಅಂತಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..