ಲೋಕಾಯುಕ್ತರ ಕೊಲೆ ಯತ್ನಕ್ಕೆ ಸುಪಾರಿ ಕೊಟ್ಟವರ್‍ಯಾರು ಗೊತ್ತಾ..? ಇದೇನು ಚಾರ್ಜ್ ಶೀಟಾ or ಬುಲ್‌ ಶಿಟಾ.? : ಸಿಸಿಬಿ ಪೊಲೀಸರ ಚಾರ್ಜ್ ಶೀಟ್ ನೋಡಿ ವಿಶ್ವನಾಥ್ ಶೆಟ್ಟಿ ಗರಂ ಆಗಿದ್ದೇಕೆ..?

ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ್‌ ಶೆಟ್ಟಿ ಅವರಿಗೆ ಚೂರಿ ಇರಿದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ಸಿಸಿಬಿ ಪೊಲೀಸರಿಗೆ ಲೈಫ್ಟ್‌-ರೈಟ್‌ ತೆಗೆದುಕೊಂಡಿದ್ದಾರೆ. ಅದು ಯಾವ ಮಟ್ಟಿಗೆ ಅಂದ್ರೆ, ಸಿಸಿಬಿ ಪೊಲೀಸರೇ ತಬ್ಬಿಬ್ಬಾಗಿದ್ದಾರೆ. ನ್ಯಾ.ವಿಶ್ವನಾಥ್‌ ಶೆಟ್ಟಿ ಹೇಳಿದ ಒಂದೊಂದು ಆಕ್ರೋಶ ಭರಿತ ಮಾತುಗಳಿಗೆ ಜವಾಬ್‌ ಕೊಡಲಾಗದೇ ಸಿಸಿಬಿ ಪೊಲೀಸರು ಗಪ್‌ಚುಪ್ ಆಗಿದ್ದಾರೆ. ‘ನಾವ್ ಯಾಕಾದ್ರೂ ಇಲ್ಲಿಗೆ ಬಂದ್ವೋ’ ಅಂತಾ ಸಿಸಿಬಿ ಪೊಲೀಸರು ತಮ್ಮನ್ನ ತಾವೇ ಶಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಲೋಕಾಯುಕ್ತ ನ್ಯಾ.ವಿಶ್ವನಾಥ್‌ ಶೆಟ್ಟಿ ಸಿಸಿಬಿ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ಯಾಕೆ ಗೊತ್ತಾ..?

ಇದು ಚಾರ್ಜ್‌ಶೀಟಾ? ಬುಲ್‌ ಶಿಟಾ..?
ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂಬ ಮಾಹಿತಿ ದೊರಕಿದ ನಂತರ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಸಿಸಿಬಿ ಪೊಲೀಸರನ್ನ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರ ಚಾರ್ಜ್‌ಶೀಟ್‌ ನೋಡಿ ಕೆಂಡಾಮಂಡಲರಾದ ಲೋಕಾಯುಕ್ತ ನ್ಯಾ.ವಿಶ್ವನಾಥ್‌ ಶೆಟ್ಟಿ, ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ಇದೇನೂ ಚಾರ್ಜ್‌ಶೀಟಾ ಅಥವಾ ಬುಲ್‌ಶೀಟಾ. ನಿಮಗೆ ತನಿಖೆ ಮಾಡೋಕೆ ಬರೋದಿಲ್ವೇನ್ರೀ. ಕೇಸ್‌ನ ಗಂಭೀರತೆ, ಕೃತ್ಯದ ಹಿಂದಿನ ಉದ್ದೇಶ ತಿಳಿಯಲಾಗದಷ್ಟು ಅಸಮರ್ಥರ ನೀವು? ಒಂದ್‌ ಕೇಸ್‌ ಅನ್ನು ಯಾವ ಯಾವ ಆಯಾಮದಲ್ಲಿ ತನಿಖೆ ಮಾಡ್ಬೇಕು ಅನ್ನೋದೇ ಗೊತ್ತಿಲ್ವಾ ನಿಮಗೆ? ತನಿಖೆಯ ಆಯಾಮಗಳೇ ಗೊತ್ತಿಲ್ಲದ್ದಿದ್ರೆ ನೀವು ಮಾಡ್ತಿರೋದಾದ್ರೂ ಏನು? ಕಾಗಕ್ಕ ಗೂಬಕ್ಕ ಕತೆ ಬರೆದು ಕೇಸ್ ಕ್ಲೋಸ್‌ ಮಾಡೋದಾದ್ರೆ ನೀವ್ಯಾಕೆ ಬೇಕು? ನನ್ನ ಕೇಸ್‌ನ ಜಾಡು, ವರದಿ ಗಮನಿಸಿದ್ರೆ ನಿಮ್ಮ ಅಸಮರ್ಥತೆ ಗೊತ್ತಾಗುತ್ತಿದೆ. ಅವಱರೋ ಬಂದರಂತೆ ಅವ್ನ ಕೇಸ್ ಕ್ಲೋಸ್ ಮಾಡಿದ್ನಂತೆ. ಅದಕ್ಕೆ ಬೇಸತ್ತು ನನಗೆ ಚಾಕು ಇರಿದನಂತೆ. ಏನ್ರೀ ಇದರ ಅರ್ಥ. ಕೇಸ್‌ನ ಅರ್ಥ, ವಾಸ್ತವ, ಹಿಂದಿನ ಸತ್ಯ ಏನು ಅಂತಾದ್ರೂ ಗೊತ್ತಾ ನಿಮಗೆ’ ಎಂದು ಲೋಕಾಯುಕ್ತ ನ್ಯಾ.ವಿಶ್ವನಾಥ್‌ ಶೆಟ್ಟಿ ಸಿಸಿಬಿ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಒಂದು ಹಂತದಲ್ಲಿ ಸಿಸಿಬಿ ಪೊಲೀಸರು ತಬ್ಬಿಬ್ಬಾಗಿದ್ದಾರೆ. ಯಾವುದೇ ಸಮಾಜಾಯಿಷಿ ಕೊಡೋದಕ್ಕೆ ಹೋದ್ರು ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವ್ರು ಕೇಳಲಿಲ್ಲ. ಬದಲಿಗೆ ಆಕ್ರೋಶವನ್ನ ಮುಂದುವರೆಸಿದ್ದಾರೆ.

‘ಚುಚ್ಚಿದೋನು ಏನೋ ಹೇಳ್ದಾ, ನೀವದ್ದನ್ನೇ ತನಿಖಾ ವರದಿಯಲ್ಲಿ ಯಥವತ್ತಾಗಿ ಇಳಿಸಿದ್ದೀರಿ. ನನಗೆ ಚಾಕು ಇರಿದ ಕೇಸ್‌ನ ಅಸಲಿಯತ್ತಾದ್ರೂ ನಿಮಗೆ ಗೊತ್ತೇನ್ರೀ. ಆರೋಪಿ ತೇಜ್‌ರಾಜ್‌ ಈ ಕೇಸ್‌ನಲ್ಲಿ ಕೇವಲ ದಾಳವಷ್ಟೇ. ಪ್ಯೂರ್ಲಿ ಇದೊಂದು ಸುಪಾರಿ ಕಿಲ್ಲಿಂಗ್‌ ಅಟೆಂಪ್ಟ್‌ ಗೊತ್ತಾ? ತೇಜ್‌ರಾಜ್ ಶರ್ಮಾರನ್ನ ಬಳಸಿಕೊಂಡು ನನ್ನ ಕೊಲೆ ಯತ್ನ ನಡೆಿದಿದೆ. ಆ ಕಾಣದ ಕೈಗಳು ಯಾವುವು? ಕೊಲೆ ಯತ್ನಕ್ಕೆ ಕಾರಣವೇನೂ ಅನ್ನೋದನ್ನ ಮೊದಲು ಪತ್ತೆ ಹಚ್ಚಿ. ನನ್ನ ಕೊಲೆ ಯತ್ನದ ಹಿಂದೆ ಬಹುದೊಡ್ಡ ಪಿತೂರಿಯೇ ಅಡಗಿದೆ. ಈ ಸಂಚು ಏನು ಅನ್ನೋದನ್ನ ಪತ್ತೆ ಹಚ್ಚಿ ಬಳಿಕ ಚಾರ್ಜ್‌ಶೀಟ್ ಸಲ್ಲಿಸಿ. ತೇಜ್‌ ರಾಜ್‌ ಶರ್ಮಾನ Scripted Statement ಆಧರಿಸಿದ ವರದಿಯನ್ನು ಕಸದ ಬುಟ್ಟಿಗೆ ಹಾಕಿ. ಹೋಗಿ, ನಾನು ಹೇಳಿದ ಹಾಗೆ ತನಿಖೆ ನಡೆಸಿ ವರದಿ ತನ್ನಿ’ ಎಂದು ನ್ಯಾ.ವಿಶ್ವನಾಥ್‌ ಶೆಟ್ಟಿ ಫುಲ್ ಗರಂ ಆಗಿದ್ದಾರೆ.

ಯಾವಾಗ ನ್ಯಾ.ವಿಶ್ವನಾಥ್ ಹೋಗಿ ಅಂದರೋ ಸಿಸಿಬಿ ಪೊಲೀಸರು ಏನು ಮಾತನಾಡದೇ ಕಚೇರಿಯಿಂದ ಹೊರ ಬಂದಿದ್ದಾರೆ. ಹೊರಬಂದು ‘ಉಸ್ಸಪ್ಪಾ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಕನ್ನಡನಾಡಿ.com ಪೇಜ್ ಲೈಕ್ ಮಾಡಿ..